Turvihal :ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ "ಅಂತರ ಕಾಲೇಜು ಏಕವಲಯ ಮಹಿಳಾ ಕಬಡ್ಡಿ ಪಂದ್ಯವಳಿ

ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ "ಅಂತರ ಕಾಲೇಜು ಏಕವಲಯ ಮಹಿಳಾ ಕಬಡ್ಡಿ ಪಂದ್ಯವಳಿ".

ತುರ್ವಿಹಾಳ:-ಅಂತರ ಕಾಲೇಜು ಏಕವಲಯ ಮಹಿಳಾ ಕಬ್ಬಡಿ ಪಂದ್ಯಾವಳಿ ಕ್ರಿಡಾಕೂಟ ರಾಯಚೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಪಟ್ಟಣದ ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾರ್ಚ್ 13 ಮತ್ತು 14 ರಂದು  ನಡೆಯಲಿರುವ ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ ಅಂತರ ಕಾಲೇಜಿನ ಏಕವಲಯ ಮಹಿಳಾ ಕಬ್ಬಡಿ ಪಂದ್ಯಾವಳಿ ಕ್ರಿಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಲಿರುವ ಶಾಸಕ ಆರ್. ಬಸನಗೌಡ ತುರ್ವಿಹಾಳ  ಅಧ್ಯಕ್ಷರು, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ. 

ರಾಯಚೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವಂತಹ ಸುಮಾರು 40 ಕಾಲೇಜುಗಳ ಮಹಿಳಾ ತಂಡಗಳು ಭಾಗವಹಿಸಲಿದ್ದು ಕ್ರಿಡಾಪಟುಗಳು ಹಾಗೂ ಕ್ರಿಡಾ ಪ್ರೇಮಿಗಳು ಆಗಮಿಸಿ ಕ್ರಿಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ರಾಠೋಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಿಪೋರ್ಟರ್ ಮೆಹಬೂಬ ಮೊಮೀನ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">