ಮೂಲಭೂತ ಸೌಕರ್ಯ ವಂಚಿತ ಗೊಂಡ ಯಳವತ್ತಿ ಗ್ರಾಮ-Siddi TV

 

ಮೂಲಭೂತ ಸೌಕರ್ಯ ವಂಚಿತ ಗೊಂಡ ಯಳವತ್ತಿ  ಗ್ರಾಮದ 4ನೇ ವಾರ್ಡ್ನಲ್ಲಿ ಬರುವ ಪ್ಲಾಟ ಏರಿಯಾ 

ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ 4ನೇಯ ವಾರ್ಡನಲ್ಲಿ ಪ್ಲಾಟ್ ಏರಿಯಾದಲ್ಲಿ ಸುಮಾರು ಸುಮಾರು ದಿನಗಳಿಂದ  ನೀರಿಗಾಗಿ ಹಾಹಾಕಾರ ಉಂಟಾಗಿದ್ದರು ಇಲ್ಲಿರುವಂತ ವಾಟರ್ ಸಪ್ಲೈ ಅವನಿಗೆ ಒಂದು ತಿಂಗಳಿಂದ ಅಲ್ಲಿನ ಸಾರ್ವಜನಿಕರು ಕೇಳಿದರು  ಸಹ ಬರೆದಿದ್ದರೆ ನಾನೇನೂ ಮಾಡಬೇಕೆಂಬ ಅರ್ಥದಲ್ಲಿ ಮಾತನಾಡುತ್ತಾನೆ ಈ ವ್ಯಕ್ತಿಗೆ  ಯಾರ ಭಯವೂ ಇಲ್ಲ  ಜನಪ್ರತಿನಿಧಿಗಳ ಭಯವೂ ಇಲ್ಲ  ಈ ವಿಷಯವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಕೇಳಿದರೆ ಕಿವಿಯ ಮೇಲೆ ಹಾಕಿಕೊಳ್ಳುತ್ತಿಲ್ಲ ಹಾಗೂ  ಜನಪ್ರತಿನಿಧಿಗಳನ್ನು ಕೇಳಿದರೆ ಹರಕೆ ಉತ್ತರ ನೀಡುತ್ತಾರೆ  ಹಾಗೂ ನೀರು ಇದ್ದಲ್ಲಿಂದ ತೆಗೆದುಕೊಂಡು ಬರಬೇಕು ಎಂದು ಹೇಳುತ್ತಾರೆ ಜನಪ್ರತಿನಿಧಿಗಳ ಗಮನಕ್ಕೆ ಇದ್ದರೂ ಸಹ ಗ್ರಾಮ ಪಂಚಾಯತಿಯವರು  ಕಣು ಮುಚ್ಚಿ ಕುಳಿತಿದ್ದಾರೆ ಎಂದು ವಾರ್ಡಿನ ಜನರು ಆಕ್ರೋಶ ವ್ಯಕ್ತಪಡಿಸಿದರು.ದಿನನಿತ್ಯದ ಕಾರ್ಯ ಚಟುವಟಿಕೆಗಳಿಗೆ ನೀರು ಅವಶ್ಯಕತೆ ಆದರೆ ಗ್ರಾಮ ಪಂಚಾಯಿತಿಯವರು ಯಾವುದುಕೂ ತಲೆ ಕೆಡಿಸಿಕೊಳ್ಳದೆ ಮೌನವಾಗಿದ್ದು ಮಲತಾಯಿ ಧೋರಣೆಯನ್ನು ತೋರುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಈಗಲಾದರೂ ಯಲವತ್ತಿ  ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಕಲ್ಪಿಸುವರೊ  ಕಾದು ನೋಡಬೇಕಾಗಿದೆ.

 ವರದಿ: ವೀರೇಶ್ ಗುಗ್ಗರಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">