ಗದಗ ಜಿಲ್ಲೆಯಲ್ಲಿ ಇನ್ನು ಸಹಕಾರಗೊಳ್ಳದ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯ ಗೃಹಲಕ್ಷ್ಮಿ ಯೋಜನೆ.ಹೌದು ಗದಗ್ ಜಿಲ್ಲೆ ಶಿರಹಟ್ಟಿ ತಾಲೂಕಿನಲ್ಲಿ ರಾಜ್ಯ ಸರ್ಕಾರದ ಐದು ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಕುಂಟುತ್ತ ಸಾಗಿದೆ. ಎಷ್ಟೋ ಬಡಪಾಯಿಗಳು ವೃದ್ಧರು ದಿನ ನಿತ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅಲೆದಾಡಿ ಸುಸ್ತಾಗಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿಂದೆ ಮಾನ್ಯ ಸಚಿವರು ಹಾಗೂ ಗದಗ್ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಶ್ರೀ ಎಚ್ ಕೆ ಪಾಟೀಲ್ ಅವರು ಶಿರಹಟ್ಟಿ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಅಕ್ಟೋಬರ್ 2 ಒಳಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಶೇಕಡಾ ನೂರರಷ್ಟು ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಆದರೆ ಶಿರಹಟ್ಟಿ ತಾಲೂಕಿನ ಹಾಗೂ ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷತನಕ್ಕೆ ಇನ್ನೂ ಪ್ರಗತಿ ಸಾಧಿಸಲು ಆಗಿಲ್ಲ. ಹಾಗಾದರೆ ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವೇ ಎಂಬುವುದು ಸಾರ್ವ ಜನಿಕರಿಗೆ ಯಕ್ಷಪ್ರಶ್ನೆಯಾಗಿದೆ.ಅನ್ನಭಾಗ್ಯದ ಡಿಬಿಟಿ ಮುಖಾಂತರ ಹಣ ಬರುತ್ತಿದ್ದರು ಗೃಹಲಕ್ಷ್ಮಿಯದು ಬರುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅಂಚೆ ಕಛೇರಿಯಲ್ಲಿ ಖಾತೆ ತೆರೆಯಿರಿ ಎಂಬ ಉತ್ತರ ಹಾಸ್ಯಾಸ್ಪದವಾಗಿದೆ. ಈಗಲಾದರೂ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಎಚ್ ಕೆ ಪಾಟೀಲ್ ಸಾಹೇಬರು ಅಧಿಕಾರಿಗಳ ಕಿವಿ ಹಿಂಡಿ ಸಾರ್ವಜನಿಕರಿಗೆ ಸರ್ಕಾರದ ಮಹತ್ವಾಕಾಶ ಯೋಜನೆಗಳು ತಲುಪಿಸಲು ಪ್ರಯತ್ನಿಸುವರೆ ಎಂದು ಕಾದು ನೋಡಬೇಕಿದೆ ಎಂದು ಜನರು ಮಾತನಾಡುತ್ತಿದ್ದರು.
ವರದಿ : ವೀರೇಶ್ ಗುಗ್ಗರಿ ಸಿದ್ದಿ ಟಿವಿ ಶಿರಹಟ್ಟಿ