Kampli: ಸರ್ಕಾರಿ ಪ್ರೌಢಶಾಲಾ ದೇವಸಮುದ್ರದ ಶಿಕ್ಷಕ ಯರಿಸ್ವಾಮಿಯವರಿಗೆ ಬಿಳ್ಕೋಡುಗೆ


ಸರ್ಕಾರಿ ಪ್ರೌಢಶಾಲಾ ದೇವಸಮುದ್ರದ ಶಿಕ್ಷಕ ಯರಿಸ್ವಾಮಿಯವರಿಗೆ ಬಿಳ್ಕೋಡುಗೆ

ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಯರಿಸ್ವಾಮಿರವರಿಗೆ ಬಿಳ್ಕೋಡುಗೆ ಹಾಗೂ ಶಿಕ್ಷಕಿ ಹುಲಿಗೆಮ್ಮ, ಶಿಕ್ಷಕ ಮಂಜುನಾಥ್ ರವರಿಗೆ ವರ್ಗಾವಣೆ ಕಾರ್ಯಕ್ರಮನ್ನು ಇಂದು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸುಮಾರು ವರ್ಷಗಳ ಕಾಲ ಶಿಕ್ಷಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ಧಾರೆಯೆಳೆಯುವ ಮೂಲಕ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಯರಿಸ್ವಾಮಿಯವರು ಪ್ರಮುಖ ಪಾತ್ರವಹಿಸಿದ್ದು, ಇಂದು ಅವರಿಗೆ ಬಿಳ್ಕೋಡುಗೆ ನೀಡಲಾಯಿತು.

ಇನ್ನು ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಶ್ರೀಮತಿ ಶಾಕುಂತಲ ಹಾಗೂ ಸಹ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಶಾಲೆಯ ಹಳೇ ವಿದ್ಯಾರ್ಥಿಗಳು ಭಾಗಿಯಾಗಿದ್ದರು‌.

ಸಿದ್ದಿ ಟಿವಿ, ಕಂಪ್ಲಿ

(6360633266)

Previous Post Next Post

Contact Form

f="https://unpkg.com/video.js/dist/video-js.css" rel="stylesheet">