ಜೋಳ ಖರೀದಿ ಹಣ ತಕ್ಷಣ ಬಿಡುಗಡೆಗೆ ರೈತ ಸಂಘ ಆಗ್ರಹ-Siddi TV

ಜೋಳ ಖರೀದಿ ಹಣ ತಕ್ಷಣ ಬಿಡುಗಡೆಗೆ ರೈತ ಸಂಘ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಜೋಳವನ್ನು ಸರ್ಕಾರ ರೈತರಿಂದ ಖರೀದಿಸಿ ನಾಲ್ಕು ತಿಂಗಳು ಕಳೆದಿದ್ದರೂ, ಬಹುತೇಕ ರೈತರಿಗೆ ಇನ್ನೂ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.

ಕೆಲವೇ ರೈತರಿಗೆ ಮುಂಗಾರು ಜೋಳದ ಹಣ ಪಾವತಿಯಾಗಿದ್ದು, ಸುಮಾರು 75% ರೈತರಿಗೆ ಇನ್ನೂ ಹಣ ಜಮೆಯಾಗಿಲ್ಲ ಎಂದು ತಿಳಿಸಲಾಗಿದೆ. ರೈತರು ಜನವರಿಯಲ್ಲಿಯೇ ಜೋಳವನ್ನು ಖರೀದಿ ಕೇಂದ್ರಗಳಿಗೆ ತಂದು ಹಲವು ಬಾರಿ ಅಲೆದಾಡಿದ ನಂತರ ಸರ್ಕಾರ ಖರೀದಿಸಿದರೂ, ಇದುವರೆಗೆ ಹಣ ಪಾವತಿಯಾಗದಿರುವುದು ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಧ್ಯಕ್ಷ ಬಿ.ವಿ ಗೌಡ ತಿಳಿಸಿದ್ದಾರೆ.

ಜೋಳ ಮಾರಾಟದಿಂದ ಬರಬೇಕಿದ್ದ ಹಣ ವಿಳಂಬವಾಗುತ್ತಿರುವ ಕಾರಣ ರೈತರು ಬಡ್ಡಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು, ಈ ವರ್ಷ ಸಾಲ ಮಾಡಿ ಬಿತ್ತನೆ ನಡೆಸಿದರೂ ಮಳೆಯ ಕೊರತೆಯಿಂದ ಮತ್ತೊಮ್ಮೆ ನಷ್ಟಕ್ಕೊಳಗಾಗಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ರೈತರಿಂದ ಖರೀದಿಸಿರುವ ಮುಂಗಾರು ಹಾಗೂ ಹಿಂಗಾರು ಜೋಳದ ಬಾಕಿ ಹಣವನ್ನು ಯಾವುದೇ ವಿಳಂಬವಿಲ್ಲದೆ ರೈತರ ಬ್ಯಾಂಕ್ ಖಾತೆಗಳಿಗೆ ತಕ್ಷಣ ಜಮಾ ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಣಗೌಡ ಪಾಟೀಲ್, ಬಸವರಾಜ್ ಗೋಡಿಹಾಳ ಸೇರಿದಂತೆ ಅನೇಕರು ಭಾಗುಯಾಗಿದ್ದರು.


Previous Post Next Post

Contact Form

f="https://unpkg.com/video.js/dist/video-js.css" rel="stylesheet">