Kampli : ತೃತೀಯ ವರ್ಷದ ಮಂತ್ರಾಲಯ ಪಾದಯಾತ್ರೆ


ತೃತೀಯ ವರ್ಷದ ಮಂತ್ರಾಲಯ ಪಾದಯಾತ್ರೆ  

ಕಂಪ್ಲಿ :  ಸಮೀಪದ ಹಿರೇಜಂತಕಲ್ ಗ್ರಾಮದಿಂದ ಆರ್ಯ ವೈಶ್ಯ ಸಮಾಜದ ಸಹಕಾರ ಹಾಗೂ ಶ್ರೀ ನವ ಬೃಂದಾವನ ಭಜನಾ ಮಂಡಳಿಯ ನೇತೃತ್ವದಲ್ಲಿ ತೃತೀಯ ವರ್ಷದ ಮಂತ್ರಾಲಯ ಪಾದಯಾತ್ರೆಯನ್ನು ಭಕ್ತರು ಭಾನುವಾರ ಆರಂಭಿಸಿದರು. ಪಟ್ಟಣದ ಮಾರ್ಗವಾಗಿ ಆಗಮಿಸಿದ ಪಾದಯಾತ್ರಿಗಳಿಗೆ ರಸ್ತೆಯುದ್ದಕ್ಕೂ ಪುಷ್ಪಗಳನ್ನು  ಇರಚುವ ಮೂಲಕ ಸ್ವಾಗತಸಲಾಯಿತು. ಬಳಿಕ ಸ್ಥಳೀಯ ಆರ್ಯ ವೈಶ್ಯ ಸಮಾಜದ ಮುಖಂಡರಾದ ಮುರುಳಿಧರ್ ಶ್ರೇಷ್ಠಿ ಅವರ ನಿವಾಸದಲ್ಲಿ ಶ್ರೀ ರಾಘವೇಂದ್ರ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಭಜನೆಯನ್ನು ನಡೆಸಿ ಪಾದ ಯಾತ್ರೆಯನ್ನು ಮುಂದುವರೆಸಲಾಯಿತು. ಇನ್ನು ಪಾದಯಾತ್ರಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಿರೇ ಜಂತಕಲ್ ಆರ್ಯ ವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ್ ಶ್ರೇಷ್ಠಿ, ಪ್ರಮುಖರಾದ ಮುರುಳಿಧರ್ ಶ್ರೇಷ್ಠಿ, ಗುರುಭಿಮಾಚಾರ್ಯ, ಜಿ.ಆರ್.ಎಸ್.ಸತ್ಯ ನಾರಾಯಣ, ದರೋಜಿ ನರಸಿಂಹ, ಜನಾದ್ರಿ ನಿಂಗಪ್ಪ ಶ್ರೇಷ್ಠಿ, ಹಣವಾಳ ಚಂದ್ರು, ಬೆನ್ನೂರು ಪ್ರಹ್ಲಾದ್ ಶ್ರೇಷ್ಠಿ, ಜನಾದ್ರಿ ಕೃಷ್ಣ ಸೇರಿ ಅನೇಕರಿದ್ದರು.

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">