Kampli : ಕೊಟ್ಟಾಲ್ ಗ್ರಾಮದ ಯುವಕ ಬೈಕ್ ಅಪಘಾತದಲ್ಲಿ ಮೃತ


ಕಂಪ್ಲಿ : 

ಯು. ಕುಮಾರ್ ರೆಡ್ಡಿ(21) ತಂದೆ ರಾಮನಾಥ್ ರೆಡ್ಡಿ ನೆಲ್ಲುಡಿ ಕೊಟ್ಟಾಲ್ ಗ್ರಾಮದ ಯುವಕ ಬೈಕ್ ಅಪಘಾತದಲ್ಲಿ ಮೃತ

ಯುವಕನಿಗೆ ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು,  ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ  ಇಂದು ಮರಣ ಹೊಂದಿದ್ದು ಇಂದೇ ಸಂಜೆ  ಅಂತ್ಯಕ್ರಿಯ ಜರುಗಿತು.

ಯುವಕ ಕುಮಾರ್ ಇಂದು ನೆಲ್ಲೂಡಿ ಕೊಟ್ಟಾಲ್ ನ ಹೊಸ ಪೆಟ್ರೋಲ್ ಬಂಕ್ ನ ಬಳಿ ಬೈಕ್ ಚಾಲಯಿಸುವ ವೇಳೆ ಟ್ರಾಕ್ಟರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರನ ತಲೆಗೆ ಬಲವಾದ ಪೆಟ್ಟು ಬಿದ್ದದ್ರಿಂದ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಗಾಗಿ ಕರೆದೋಯ್ದಿದ್ದರು, ಚಿಕಿತ್ಸೆ ಫಲಕಾರಿಯಾಗದೆ, ಯುವಕ ಕುಮಾರ್ ಮೃತ ಪಟ್ಟಿದ್ದಾನೆ.

ಕುಮಾರ್ ವಿದ್ಯಾಭ್ಯಾಸದಲ್ಲಿ ಮುಂದಿದ್ದ ಹಾಗೂ ಶಾಲೆಗೆ ಉತ್ತಮ ಫಲಿತಾಂಶ ತಂದು ಕೊಟ್ಟಿದ್ದ ಮತ್ತು ನಗರದ ಖಾಸಗಿ ಶಾಲೆಯೊಂದರಲ್ಲಿ 2020-21 ಸಾಲಿನಲ್ಲಿ ಹತ್ತನೇ ತರಗತಿ ಪೂರ್ಣಗೊಳಿಸಿದ್ದ ಎಂದು ತಿಳಿದು ಬಂದಿದೆ.

ಎಚ್ಚರ : ನಗರದಲ್ಲಿ ಇಚ್ಚಿಚ್ಚಿಗೆ ರಸ್ತೆ ಅಪಘಾತಗಳು ಹೆಚ್ಚಾಗಿವೆ, ಮಳೆಗಾಲದಲ್ಲಿ ಎಚ್ಚರದಿಂದ ವಾಹನ ಚಾಲಯಿಸಿ, ನಿಮಗಾಗಿ ನಿಮ್ಮ ಕುಟುಂಬದವರು ಎದುರು ನೋಡುತ್ತಿರುತ್ತಾರೆ.

ಗಮನ ಹರಿಸಿ : ಸ್ಥಳೀಯ ಪೋಲಿಸ್ ಇಲಾಖೆ ಹಾಗೂ ಅರೋಗ್ಯ ಇಲಾಖೆಯವರು ಅಪಘಾತದ ಬಗ್ಗೆ ಕಂಪ್ಲಿಯಲ್ಲಿ ಜಾಗೃತಿ ಮೂಡಿಸುವ ಮೂಖೇನ ರಸ್ತೆ ಅಪಘಾತಗಳನ್ನು ತಡೆಯುವಲ್ಲಿ ಗಮನಹರಿಸಿ ಎಂಬುದು ಸಿದ್ದಿ ಟಿವಿ ಒತ್ತಾಯ


ರಘುವೀರ್, ಸಿದ್ದಿ ಟಿವಿ, ಕಂಪ್ಲಿ



Previous Post Next Post

Contact Form

f="https://unpkg.com/video.js/dist/video-js.css" rel="stylesheet">