Siruguppa : ಗಾಂಜಾ ಅಕ್ರಮ ಸಾಗಾಟ ಸಿರುಗುಪ್ಪದಲ್ಲಿ ಐವರ ಬಂಧನ


ಗಾಂಜಾ ಅಕ್ರಮ ಸಾಗಾಟ ಸಿರುಗುಪ್ಪದಲ್ಲಿ ಐವರ ಬಂಧನ

ಬಳ್ಳಾರಿ: ಆಂದ್ರಪ್ರದೇಶದಿಂದ ಜಿಲ್ಲೆಯ ಸಿರುಗುಪ್ಪಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿ 2.65 ಲಕ್ಷ ರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸಿರುಗುಪ್ಪ- ಪಟ್ಟಣದ ಆದೋನಿ ರಸ್ತೆಯಲಿರುವ ಎ.ಆರ್.ಎಸ್ ಫಾರ್ಮ್ ಹತ್ತಿರ ಆದೋನಿ ಕಡೆಯಿಂದ ಎರಡು ದ್ವಿಚಕ್ರ ವಾಹನಗಳಲ್ಲಿ ಗಾಂಜಾ ಇರಿಸಿಕೊಂಡು ಬಳ್ಳಾರಿಯ ಶರ್ಮಾಸ್ ವಲಿ, ಶೈಲೇಂದ್ರ, ಶೇಖ್ ಹಬೀದ್, ಬಲರಾಮ, ಕಾರ್ತಿಕ್ ಎಂಬುವವರು ಬರುತ್ತಿದ್ದರು.

ಸಿರುಗುಪ್ಪ ಪೊಲೀಸ್ ಠಾಣೆಯ ಸಿಬ್ಬಂದಿ ತಮಗೆ ದೊರೆತ ಖಚಿತ ಮಾಹಿತಿಯಿಂದ ಇವರನ್ನು ತಡೆದು ಪರಿಶೀಲನೆ ಮಾಡಿ, ಗಾಂಜಾ ಜಫ್ತು ಮಾಡಿ ಐವರನ್ನು ಬಂಧಿಸಿದ್ದಾರೆಂದು ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">