CM : ಸಿಎಂ ಕೊಪ್ಪಳ ಭೇಟಿ ವೇಳೆ ಭದ್ರತಾ ನಿಯಮ ಉಲ್ಲಂಘಿಸಿದ ಆರೋಪ: ಶಾಸಕ ಜನಾರ್ಧನ ರೆಡ್ಡಿಗೆ ನೋಟಿಸ್ ಜಾರಿ


ಸಿಎಂ ಕೊಪ್ಪಳ ಭೇಟಿ ವೇಳೆ ಭದ್ರತಾ ನಿಯಮ ಉಲ್ಲಂಘಿಸಿದ ಆರೋಪ: ಶಾಸಕ ಜನಾರ್ಧನ ರೆಡ್ಡಿಗೆ ನೋಟಿಸ್ ಜಾರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತಾ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಕೊಪ್ಪಳ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಅವರು, ಬೆಂಗಳೂರಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಸಿಎಂ ಆಗಮನ ಹಿನ್ನೆಲೆಯಲ್ಲಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಸಿ ತೆರಳಲು ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ಸ್ಥಳದಲ್ಲಿದ್ದ ವಾಹನ ಸವಾರರು ಟ್ರಾಫಿಕ್ ಜಾಮ್​​ ನಿಂದ ಸಮಸ್ಯೆ ಎದುರಿಸಿದ್ದರು.

ಇದೇ ವೇಳೆ ಸಿಎಂ ಎದುರಿಗೆ ಬರುತ್ತಿದ್ದ ಶಾಸಕ ಜನಾರ್ದನರೆಡ್ಡಿ ಕಾರನ್ನು ಕೂಡ ಪೊಲೀಸರು ತಡೆದಿದ್ದರು ಎನ್ನಲಾಗಿದೆ. 20 ನಿಮಿಷಗಳ ಕಾಲ ಶಾಸಕ ಜನಾರ್ದನ ರೆಡ್ಡಿ ಇದ್ದ ಕಾರು ರಸ್ತೆಯಲ್ಲೇ ಕಾದು ನಿಂತಿತ್ತು. ಇದರಿಂದ ಅಸಮಾಧಾನಗೊಂಡ ಶಾಸಕರು, ಕೊನೆಗೆ ಡಿವೈಡರ್​​ ಮೇಲೆಯೇ ಕಾರು ಹತ್ತಿಸಿ ಸಿಎಂ ಬರ್ತಿದ್ದ ಮಾರ್ಗದಲ್ಲೇ ಸ್ವತಃ ಕಾರು ಚಲಾಯಿಸಿಕೊಂಡು ತೆರಳಿದ್ದಾರೆಂದು ಹೇಳಲಾಗುತ್ತಿದೆ.

ಸಿಎಂ ಕಾರು ಆಗಮಿಸುತ್ತಿದ್ದ ವೇಳೆ ರಾಂಗ್ ರೂಟ್​​ನಲ್ಲಿ ಮತ್ತೊಂದು ಕಾರು ಬರೋದನ್ನು ಕಂಡ ಸಿಎಂ ಸಿದ್ದರಾಮಯ್ಯ ಅವರ ಬೆಂಗಾವಲು ಪಡೆ ಕೊನೆಗೆ ತಮ್ಮ ಕಾರನ್ನೇ ನಿಲ್ಲಿಸಿ ಜನಾರ್ದನ ರೆಡ್ಡಿ ಕಾರು ಪಾಸ್​ ಆದ ಬಳಿಕ ಸಿಎಂ ಅವರನ್ನು ಕರೆದುಕೊಂಡು ಹೋಗಿದ್ದಾರೆಂದು ಹೇಳಲಾಗುತ್ತಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">