ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿದ ತಹಶಿಲ್ದಾರ್
ಕಂಪ್ಲಿ : ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿರುವ ಡಾ.ಬಿ.ಆರ್ ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆಗೆ ಕಂಪ್ಲಿ ತಾಲೂಕಿನಿಂದ ಸುಮಾರು 35 ಕ್ಕೂ ಅಧಿಕ ಜನರು ತೆರಳಿದ್ದು, ಯಾತ್ರೆಗೆ ಕಂಪ್ಲಿ ತಹಶಿಲ್ದಾರ್ ಶಿವರಾಜ್ ರವರು ಚಾಲನೆ ನೀಡಿದರು.
ನಾಗಪುರ್ ನಲ್ಲಿ ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆಗೆ ಇಂದು ಬೆಳಿಗ್ಗೆ ಕಂಪ್ಲಿಯಿಂದ ತೆರಳಿದ ಜನರಿಗೆ"ಸುರಕ್ಷಿತವಾಗಿ ಹೋಗಿ -ಸುರಕ್ಷಿತವಾಗಿ ಬನ್ನಿ" ಎಂದು ತಹಶಿಲ್ದಾರ್ ಶಿವರಾಜ್ ರವರು ಶುಭ ಕೋರಿದರು.
ಇನ್ನು ಈ ಸಂದರ್ಭದಲ್ಲಿ ವಿರೂಪಾಕ್ಷ, ಬೌದ್ದ ಸಮಾಜದ ರಮೇಶ್ ಸುಗ್ಗೆನಳ್ಳಿ, ಲಕ್ಷ್ಮಣ ಹಾಗೂ ಅಂಬೇಡ್ಕರ್ ಅನುಯಾಯಿಗಳು ಉಪಸ್ಥಿತರಿದ್ದರು.