TB Dam : ತುಂಗಭದ್ರಾ ನದಿಗೆ ಈಜಲು ಹೋಗಿದ್ದ ಬಾಲಕ ಸಾವು


 ತುಂಗಭದ್ರಾ ನದಿಗೆ ಈಜಲು ಹೋಗಿದ್ದ ಬಾಲಕ ಸಾವು

ಕೊಪ್ಪಳ: ತುಂಗಾಭದ್ರಾ ನದಿಗೆ ಈಜಲು ಹೋಗಿದ್ದ ಬಾಲಕನೋರ್ವ ನೀರು ಪಾಲಾಗಿರುವ ಘಟನೆ ರವಿವಾರ ಸಂಜೆ ತಾಲ್ಲೂಕಿನ ಲಾಚನಕೇರಾ ಗ್ರಾಮದ ಹಿನ್ನೀರು ಪ್ರದೇಶದಲ್ಲಿ ನಡೆದಿದೆ.

ನೀರು ಪಾಲದ ದೇವರಾಜ ತಂದೆ ಯಂಕಪ್ಪ ಹಾದಿಮನಿ (14) ಎಂಬಾತನಾಗಿದ್ದು, ಕರ್ಕಿಹಳ್ಳಿ ಪ್ರೌಢ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದು, ದಸರಾ ರಜೆ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ರವಿವಾರ ನದಿ ವೀಕ್ಷಣೆಗೆ ಆಗಮಿಸಿದ್ದಾಗ ಈಜಲು ನದಿಗೆ ಇಳಿದಾಗ ನೀರಿನ ಸೆಳುವಿಗೆ ಸಿಲುಕಿ ನೀರು ಪಾಲಾಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಯವರು ಶೋಧ ಕಾರ್ಯ ನಡೆಸಿ ಬಾಲಕನ ಶವ ಹೊರತೆಗೆದಿದ್ದಾರೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">