Kampli: ಸ್ವಾಮಿ ವಿವೇಕಾನಂದ ಸದ್ಭಾವನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಜಗದೀಶ ಪೂಜಾರ್


ಸ್ವಾಮಿ ವಿವೇಕಾನಂದ ಸದ್ಭಾವನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಜಗದೀಶ ಪೂಜಾರ್

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ನೀಡುವ  2024-25 ನೇ ಸಾಲಿನ ರಾಜ್ಯ ಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನ ಪ್ರಶಸ್ತಿಗೆ ಕಂಪ್ಲಿ ತಾಲೂಕಿನ ಕಣ್ವಿತಿಮ್ಮಲಾಪುರ ನಿವಾಸಿ ಜಗದೀಶ್ ಪೂಜಾರ್ ಬಳ್ಳಾರಿ ಜಿಲ್ಲೆಯಿಂದ   ಆಯ್ಕೆಯಾಗಿದ್ದಾರೆ ಇವರು ಸುಮಾರು 15 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಮತ್ತು ಯುವನತೆಗೆ ಸ್ವಚ್ಚತಾ ಅಭಿಯಾನ,ಗ್ರಾಮೀಣ ಕ್ರೀಡಾ ಚಟುವಟಿಕೆ,ಸಾಂಸ್ಕೃತಿಕ ಚಟುವಟಿಕೆ, ಏರ್ಪಡಿಸಿ ಪ್ರೋತಾಹಿಸುತ್ತಾ ಸಾಹಸ ಕ್ರೀಡೆ ಹಾಗೂ ಪಲ್ಸ್ ಪೋಲಿಯೊ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವ ಮೂಲಕ ಮತ್ತು ಪ್ರತಿ ವರ್ಷ ರಾಷ್ಟ್ರೀಯ ಹಬ್ಬ, ಯೋಗ ದಿನಾಚರಣೆಗಳನ್ನು ಆಚರಿಸುತ್ತಾ ಅನೇಕ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಅನುಪಮವಾಗಿ ಸೇವೆ ಸಲ್ಲಿಸಿರುತ್ತಾರೆ.ಇವರ ಸೇವೆಯನ್ನು ಗುರುತಿಸಿ ಸ್ವಾಮಿ ವಿವೇಕಾನಂದ ಸದ್ಭಾವನ ರಾಜ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಫೆಬ್ರವರಿ-5 ಮುದ್ದೆಬಿಹಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ  ಪ್ರಧಾನ ಮಾಡಲಿದ್ದಾರೆ

ಇವರಿಗೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ‌‌.ಎಸ್.ಬಾಲಜಿ ಹಾಗೂ ಕಲುಬುರಗಿ ವಿಭಾಗೀಯ ಸಂಚಾಲಕ ಮಂಜುನಾಥ ಜಿ.ಗೊಂಡಬಾಳ ಅಭಿನಂದಿಸಿದ್ದಾರೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">