ನಗರದಲ್ಲಿ ಹೊಸ ಕೋವಿಡ್ ಧೃಡ : ವೈದ್ಯಕೀಯ ವ್ಯವಸ್ಥೆ ಸಜ್ಜು, ಜನರಲ್ಲಿ ಭಯ ಬೇಡ
ಬಳ್ಳಾರಿ:ಸುಮಾರು ಮೂರು ವರ್ಷಗಳ ಬಳಿಕ, ಬಳ್ಳಾರಿಯಲ್ಲಿ ಮತ್ತೆ ಹೊಸ ಕೋವಿಡ್ ಪ್ರಕರಣವೊಂದು ದೃಢಪಟ್ಟಿದೆ. ಸೋಂಕಿತನಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೂಡಲೇ ಎಚ್ಚರಿಕೆಯಿಂದ ಕಾರ್ಯಪ್ರವೃತ್ತವಾಗಿದೆ.
ವಿಮಾನ ಸಂಸ್ಥೆ (ವಿಮ್ಸ್) ಮತ್ತು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್‌ಗಳನ್ನು ಸಜ್ಜುಗೊಳಿಸಲಾಗಿದ್ದು, ಆಮ್ಲಜನಕ ಬೆಡ್‌ಗಳು, ಅಗತ್ಯ ಔಷಧಿಗಳ ಲಭ್ಯತೆ ಹಾಗೂ ಲಸಿಕೆಗಳ ಸಿದ್ಧತೆ ಪೂರ್ಣಗೊಂಡಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲೆಯಲ್ಲಿ ಎರಡು ಪ್ರಮುಖ ಆಸ್ಪತ್ರೆಗಳು ಸಿದ್ಧವಾಗಿವೆ.
ಸಂಪರ್ಕದಿಂದ ಹರಡುವ ಈ ಸೋಂಕಿನ ಹೊಸ ರೂಪಾಂತರವು ಸಾಮಾನ್ಯ ರೋಗ ಲಕ್ಷಣಗಳಂತೆಯೇ ಕಾಣಿಸುತ್ತಿದೆ. ಆರೋಗ್ಯ ಇಲಾಖೆ ಪ್ರಕಾರ ಜನರು ಭಯಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯ ಎಂದು ಡಾ.ರಮೇಶ್ ಯಲ್ಲಾ ಬಾಬು ರವರು ಮೇ 24 ಶನಿವಾರ ಮಧ್ಯಾಹ್ನ 3 ಗಂಟೆಗೆ ತಿಳಿಸಿದರು.