ಚೆನ್ನದಾಸರ ದುರುಗಪ್ಪರ ಮೂರನೇ ಪುಣ್ಯಸ್ಮರಣೆ ಕಾರ್ಯಕ್ರಮ
ಮೆಟ್ರಿ , ಕಂಪ್ಲಿ(ಸಿದ್ದಿ ಟಿವಿ): ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ–೨೦೨೧ರ ಪುರಸ್ಕೃತರಾಗಿದ್ದ ಮೆಟ್ರಿ ಗ್ರಾಮದ ದಿವಂಗತ ಚೆನ್ನದಾಸರ ದುರುಗಪ್ಪ ಅವರ ಮೂರನೇ ಪುಣ್ಯಸ್ಮರಣೆ ಅಂಗವಾಗಿ, ಕಂಪ್ಲಿ ತಾಲೂಕಿನ ಮೆಟ್ರಿಯಲ್ಲಿ ಭಾವಪೂರ್ಣ ಕಾರ್ಯಕ್ರಮಗಳು ಜರುಗಿದವು.
ಈ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಚೆನ್ನದಾಸರ ಯುವಕರ ಹಾಗೂ ಕ್ಷೇಮಾಭಿವೃದ್ಧಿ ಸಂಘ ಮತ್ತು ಸ್ನೇಹಜೀವಿ ಸಂಘ, ಮೆಟ್ರಿ ಅವರು ಸಂಯುಕ್ತವಾಗಿ ಆಯೋಜಿಸಿದ್ದರು. ಕಾರ್ಯಕ್ರಮದ ಒಂದು ಭಾಗವಾಗಿ ಪ್ರಮುಖ ಕ್ರೀಡಾಪಟುಗಳಿಗೆ ನೆನಪಿನ ಕಾಣಿಕೆ ವಿತರಣೆ ಮಾಡಲಾಯಿತು.
ಇದೇ ವೇಳೆ, ಚೆನ್ನದಾಸರ ದುರುಗಪ್ಪ ಅವರು ವಾಸವಿದ್ದ ಮನೆ ಹಾಗೂ ಗ್ರಾಮ ಸ್ಮಶಾನ ಅಭಿವೃದ್ಧಿಗೆ ಶಾಸಕರ ಆಪ್ತರ ಗಮನ ಸೆಳೆಯಲಾಯಿತು.
ಕಾರ್ಯಕ್ರಮದಲ್ಲಿ ತ್ರಿಪದಿ ಕವಿ ಸರ್ವಜ್ಞ ಸಂಘದ ಅಧ್ಯಕ್ಷ ಕೆ. ರಾಜಪ್ಪ ಅವರು ಮಾತನಾಡಿ, "ಚೆನ್ನದಾಸರ ದುರುಗಪ್ಪ ಅವರ ಸಾಧನೆ, ಸಂಗೀತದ ಪ್ರೀತಿ ಮತ್ತು ಸಾಮಾಜಿಕ ಸೇವೆ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ," ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯದ ಮೆಟ್ರಿ ಘಟಕದ ಅಧ್ಯಕ್ಷ ಹಂಪಾರೆಡ್ಡಿ, ಚೆನ್ನದಾಸರ ಸಂಘದ ಗೌರವಾಧ್ಯಕ್ಷ ಸಿ. ಡಿ. ಮಾರೇಶ, ಹಾಗೂ ಸಮುದಾಯದ ಮುಖಂಡ ಪ್ರಕಾಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಮಾರಂಭದಲ್ಲಿ ಸಂಗೀತ ಪ್ರೇಮಿಗಳು, ಕುಟುಂಬದವರು, ಕ್ರೀಡಾಪಟುಗಳು ಹಾಗೂ ಅಭಿಮಾನಿಗಳು ಭಕ್ತಿಪೂರ್ವಕವಾಗಿ ಭಾಗವಹಿಸಿದರು.
ರಾಷ್ಟ್ರಮಟ್ಟದ ಕ್ರೀಡಾಪಟು ಸಿ.ಡಿ. ಚಿನ್ನರಾಜ ಅವರು ಸಮಗ್ರ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.