ಬಡಿಗೇರ ಜಿಲಾನಸಾಬ್ ರವರಿಗೆ ರಾಜ್ಯಮಟ್ಟದ 'ಕರ್ನಾಟಕ ಕವಿಭೂಷಣ' ಪ್ರಶಸ್ತಿ
ಕಂಪ್ಲಿ : ಚುಟುಕು ಸಾಹಿತ್ಯ ಪರಿಷತ್ ಕೊಪ್ಪಳ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿಯಲ್ಲಿ ಪಟ್ಟಣದ ಶಿಕ್ಷಕ ಸಾಹಿತಿ ಬಡಿಗೇರ್ ಜಿಲಾನಸಾಬ್ ಅವರಿಗೆ ರಾಜ್ಯಮಟ್ಟದ 'ಕರ್ನಾಟಕ ಕವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಭಾನುವಾರ ರಂದು ಕೊಪ್ಪಳ ನಗರದ ಶ್ರೀ ಮಹಾಂತಯ್ಯನ ಮಠ ಕಲ್ಯಾಣ ಮಂಟಪದಲ್ಲಿ ಕಿಶನ್ ಸುರ್ವೆ ಹಾಗೂ ತೇಜಸ್ವಿ ರವರ ಮದುವೆ ನಿಮಿತ್ಯ ಜರುಗಿದ ಕವಿಗೋಷ್ಠಿಯಲ್ಲಿ "ವೀರ ಯೋಧರ ನಿಮಗೊಂದು ನನ್ನ ಸಲಾಂ" ಎಂಬ ಶೀರ್ಷಿಕೆಯ ಕವನ ವಾಚನ ವಾಚಿಸಿದಕ್ಕಾಗಿ ರಾಜ್ಯಮಟ್ಟದ 'ಕರ್ನಾಟಕ ಕವಿಭೂಷಣ' ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಭಾಗ್ಯ ಜ್ಯೋತಿ, ಬೆಂಗಳೂರಿನ ಹಿರಿಯ ಪತ್ರಕರ್ತರಾದ ರಮೇಶ ಸುರ್ವೆ, ಗದಗ ಹಿರಿಯ ಸಾಹಿತಿಗಳಾದ ಡಾ. ರಾಜೇಂದ್ರ ಗಡಾದ, ಸಿರಿ ಕನ್ನಡ ರಾಜ್ಯಾಧ್ಯಕ್ಷರಾದ ಜಿ.ಎಸ್. ಗೋನಾಳ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ಕನ್ನಡ ಚಲನಚಿತ್ರದ ನಾಯಕಿ ಮೀನಾ ಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.