Kampli : 178ನೇ ಮಹಾಮನೆ ಕಾರ್ಯಕ್ರಮ


178ನೇ ಮಹಾಮನೆ ಕಾರ್ಯಕ್ರಮ

ಕಂಪ್ಲಿ : ಕಂಪ್ಲಿ ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠ ಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ 178ನೇ ಮಹಾಮನೆ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

 ಕುರುಗೋಡು ಸಮೀಪದ ಹೊಸ ಯಲ್ಲಾಪುರ ಗ್ರಾಮದ ಶ್ರೀ ಗುರುಲಿಂಗೇಶ್ವರ ಮಠದ ಸೇವಾಕರ್ತರು ಹಾಗೂ  ಪುರಾಣ ಪ್ರವಚಕರು ಬಿ .ಬಾಬು  ಇವರು ಶರಣರ ದೃಷ್ಟಿಯಲ್ಲಿ ಕಾಯಕ ಕುರಿತು ಉಪನ್ಯಾಸ ನೀಡಿದರು. 

12ನೇ ಶತಮಾನದ ಶರಣರ ವಚನಗಳು  ಇಂದಿಗೂ ಜೀವಂತ. ತ್ರಿಕರಣ ಶುದ್ದಿಯಿಂದ ಕಾಯಕ ಮಾಡಬೇಕು. ಕಾಯಕದಲ್ಲಿ ಮೇಲು-ಕೀಳು ಎನ್ನದೆ ಸಮಾನ ದೃಷ್ಟಿಯಿಂದ ಮಾಡಬೇಕು.

ವ್ಯಕ್ತಿ ಜಾತಿಯಿಂದ ಶ್ರೇಷ್ಠ ಅಲ್ಲ ವೃತ್ತಿಯಿಂದ ಶ್ರೇಷ್ಠ , ಶರಣರ ವಚನಗಳು ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ, ಮೂಢನಂಬಿಕೆ ಮೌಡ್ಯತೆ ಯನ್ನು ಹೋಗಲಾಡಿಸಿದವು ಎಂದು ತಿಳಿಸಿದರು.

ಇದೇ ವೇಳೆ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಶಿಕ್ಷಕರಾದ ಎಚ್ ಮಲ್ಲೇಶ, ಅಶೋಕ್ ಕುಕನೂರು ವೇದಿಕೆಯನ್ನು ಅಲಂಕರಿಸಿದ್ದರು.

ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಎಸ್.ಡಿ.ಬಸವರಾಜ, ಬಿ.ಎಂ.ರುದ್ರಯ್ಯ, ಪಾಮಯ್ಯ ಶರಣರು, ಚಂದ್ರಯ್ಯ ಸೊಪ್ಪಿಮಠ, ಎಸ್.ರಾಮಪ್ಪ, ಕೆ.ಯಂಕಾರೆಡ್ಡಿ, ಹೆಚ್ ನಾಗರಾಜ, ಬಡಿಗೇರ್ ಜಿಲಾನಸಾಬ್, ಹೆಚ್ ಪಂಪಾಪತಿ, ಹೆಚ್. ಹುಲುಗಪ್ಪ, ಹೆಚ್. ಬಸವರಾಜ, ಪಾಂಡುರಂಗಪ್ಪ, ಬೆಳಗೋಡ ಶರಣಪ್ಪ, ಚನ್ನಪ್ಪ ಸೇರಿದಂತೆ  ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">