Kampli : ವಿಠಲಾಪುರ ಮತ್ತು ಮುದ್ಲಾಪುರ ಕೆರೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಿ, ಶಾಸಕರಿಗೆ ರೈತರ ಬೇಡಿಕೆ


ವಿಠಲಾಪುರ ಮತ್ತು ಮುದ್ಲಾಪುರ ಕೆರೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಿ, ಶಾಸಕರಿಗೆ ರೈತರ ಬೇಡಿಕೆ

ಕಂಪ್ಲಿ: ಕಂಪ್ಲಿ ತಾಲೂಕಿನ ರೈತರು ಹಾಗೂ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು, ಸ್ಥಳೀಯ ಶಾಸಕರಿಗೆ ಮನವಿಪತ್ರ ನೀಡಿ, ಮುದ್ಲಾಪುರದ ಗೌರಮ್ಮ ಕೆರೆ ಮತ್ತು ರಾಮಸಾಗರ ಗ್ರಾಮದ ವಿಠಲಾಪುರ ಕೆರೆ ಸುತ್ತಲಿನ ಜಂಗಲ್ ತೆರವು ಮತ್ತು ಟೂಬು, ಕಾಲುವೆಗಳ ದುರಸ್ತಿ ಕೆಲಸಗಳಿಗೆ ಕ್ರಮಕೈಗೊಳ್ಳುವಂತೆ ಮೇ, 26 ಸೋಮವಾರ ಮಧ್ಯಾಹ್ನ 1 ಗಂಟೆಗೆ ಸಂಘಟನೆಯ ತಾಲೂಕು ಅಧ್ಯಕ್ಷ ಗಂಗಾಧರ ರವರು ಆಗ್ರಹಿಸಿದ್ದಾರೆ.

ಸುಮಾರು ವರ್ಷಗಳಿಂದ ನಿರ್ಲಕ್ಷ್ಯದಲ್ಲಿದ್ದ ಈ ಕೆರೆ ಸುತ್ತಮುತ್ತ ಜಂಗಲ್ ಬೆಳೆದಿದ್ದು, ನೀರು ಹರಿಯುವ ಟೂಬುಗಳು, LLC ಕಾಲುವೆಗಳ ಮಡಿಗಳು ತೊಂದರೆಯಲ್ಲಿವೆ. ಇದರ ಪರಿಣಾಮವಾಗಿ ರೈತರಿಗೆ ನೀರಿನ ಕೊರತೆ ಉಂಟಾಗಿ ಕೃಷಿಕರನ್ನು ಬಿಕ್ಕಟ್ಟಿಗೆ ತಳ್ಳಿದೆ.

ಸ್ಥಳೀಯ ಶಾಸಕನವರ ಸದಸ್ಯೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಕೆರೆಗಳ ಸುತ್ತಲಿನ ಜಮೀನು ಶುದ್ಧೀಕರಣ, ಜಲಮಾರ್ಗದ ದುರಸ್ತಿ ಮತ್ತು ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮಾಧ್ಯಮದ ಮೂಲಕ ರೈತರು ಮನವಿ ಮಾಡಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">