Kampli : ನಗರದ ಸೋಮಪ್ಪನ ಕೆರೆ ಆವರಣದಲ್ಲಿ “ತಾಯಿಯ ಹೆಸರಿನಲ್ಲಿ ಒಂದು ವೃಕ್ಷ” ಅಭಿಯಾನಕ್ಕೆ ಚಾಲನೆ


ನಗರದ ಸೋಮಪ್ಪನ ಕೆರೆ ಆವರಣದಲ್ಲಿ “ತಾಯಿಯ ಹೆಸರಿನಲ್ಲಿ ಒಂದು ವೃಕ್ಷ” ಅಭಿಯಾನಕ್ಕೆ ಚಾಲನೆ

 ಕೇಂದ್ರ ಸರ್ಕಾರದ “ತಾಯಿಯ ಹೆಸರಿನಲ್ಲಿ ಒಂದು ವೃಕ್ಷ” ಅಭಿಯಾನಕ್ಕೆ ಬಳ್ಳಾರಿ ನಗರದಲ್ಲಿರುವ ಸೋಮಪ್ಪ ಕೆರೆ ಆವರಣದಲ್ಲಿ ಪುರಸಭೆ ಅಧ್ಯಕ್ಷ ಬಿ. ಪ್ರಸಾದ್  ರವರು ಚಾಲನೆ ನೀಡಿ, ಮಾತನಾಡಿದ ಅವರು,ಅಭಿಯಾನದ ಉದ್ದೇಶ ಭೂಮಿ ಅವನತಿ ತಡೆಯುವ ಹಾಗೂ ಪರಿಸರ ಸಂರಕ್ಷಣೆಯ ಭಾಗವಾಗಿ ಗಿಡ ನೆಡುವುದಾಗಿದೆ ಎಂದು ಅವರು ತಿಳಿಸಿದರು. ಪುರಸಭೆಯ ಚಿತ್ರಗಾರ ಪ್ರಶಾಂತ ನಗರೀಕರಣದಿಂದ ನಾಶವಾಗುತ್ತಿರುವ ಪರಿಸರದ ರಕ್ಷಣೆಗೆ ಇಂತಹ ಅಭಿಯಾನಗಳು ಅವಶ್ಯಕ ಎಂದರು.

ಅಭಿಯಾನದ ಭಾಗವಾಗಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ವೃಕ್ಷ ಕಿಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಾದ ಸಿ.ಆರ್. ಹನುಮಂತ, ವಿ.ಎಲ್. ಬಾಬು, ಜಿ. ಸುಧಾಕರ್, ರಾಘವೇಂದ್ರ, ನಾಗರಾಜ್, ವಸಂತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">