Vijayanagara : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ನೋಬೆಲ್ ಪುರಸ್ಕೃತರ ವಿಚಾರಣ ಸಂಕಿರಣ ಸ್ಪರ್ಧೆ:ವಿಜೇತರಿಗೆ ನಗದು ಬಹುಮಾನ


ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ನೋಬೆಲ್ ಪುರಸ್ಕೃತರ ವಿಚಾರಣ ಸಂಕಿರಣ ಸ್ಪರ್ಧೆ:ವಿಜೇತರಿಗೆ ನಗದು ಬಹುಮಾನ

ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ  ಭೌತಶಾಸ್ತ್ರದಲ್ಲಿ ನೋಬೆಲ್ ಪುರಸ್ಕೃತರ ವಿಚಾರಣ ಸಂಕಿರಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು, ಸದರಿ ಸ್ಪರ್ಧೆಯಲ್ಲಿ ವಿಭಾಗದ ಮುಖ್ಯ ಅವರಣದ ವಿದ್ಯಾರ್ಥಿಗಳು, ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ ಮತ್ತು ನಗರದ ಎಸ್ ಎಸ್ ಎ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಒಟ್ಟಾರೆಯಾಗಿ 11 ಗುಂಪಿನ ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ ನೋಬೆಲ್ ಪುರಸ್ಕೃತರ ಸಾಧನೆ ಮತ್ತು ಅವರು  ನೀಡಿದ ಕೊಡುಗೆಯನ್ನು ತಿಳಿಯಪಡಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗದ ಮುಖ್ಯಸ್ಥರಾದ ಡಾ ತಿಪ್ಪೇರುದ್ರಪ್ಪ ಜೆ ವಹಿಸಿ ಮಾತನಾಡಿದ ಅವರು,ನೋಬೆಲ್ ಪುರಸ್ಕೃತರ ಸಾಧನೆಗಳು ಮತ್ತು ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಸದರಿ ಸ್ಪರ್ಧೆಯ ಬಾಹ್ಯ ತೀರ್ಪುಗಾರರಾಗಿ ಗಣಿತ ವಿಭಾಗದ ಡಾ ಪದ್ಮನಾಭ ರೆಡ್ಡಿ ಮತ್ತು ಜೈವಿಕ ತಂತ್ರಜ್ಞಾನದ ಡಾ ಆಶಾಜ್ಯೋತಿ ಅವರು ಭಾಗವಹಿಸಿದ್ದರು ಮತ್ತು ವಿಭಾಗದ ಪ್ರಾಧ್ಯಪಾಕರುಗಳು ಉಪಸ್ಥಿತರಿದ್ದರು ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದರು, ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧೆಯ ಪ್ರಥಮ 3 ಗುಂಪುಗಳ ವಿಜೇತರಿಗೆ ನಗದು ಬಹುಮಾನವನ್ನು ವಿತರಿಸಲಾಯಿತು ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಯಿತು.ಈ ಕಾರ್ಯಕ್ರಮವನ್ನು ಆಯೋಜಕರಾದ ಡಾ ಅವಿನಾಶ್ ಪಿ, ನಿರೂಪಿಸಿ ವಂದಿಸಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">