Kampli : ಸೋಮಲಾಪುರ ಗ್ರಾಮದಲ್ಲಿ ತೋಳದ ದಾಳಿಗೆ 13 ಕುರಿಗಳು ಬಲಿ ; 1.2ಲಕ್ಷ ರೂ.ನಷ್ಟ


ಸೋಮಲಾಪುರ ಗ್ರಾಮದಲ್ಲಿ ತೋಳದ ದಾಳಿಗೆ 13 ಕುರಿಗಳು ಬಲಿ

ಕಂಪ್ಲಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ದೇವಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ದರೋಜಿ ಸೋಮಲಾಪುರ ಗ್ರಾಮದಲ್ಲಿ ಜುಲೈ 14, ಸೋಮವಾರ ಸಂಜೆ 5:30ಕ್ಕೆ ಸಂಭವಿಸಿದ ದಾರುಣ ಘಟನೆಯಲ್ಲಿ ತೋಳದ ದಾಳಿಗೆ 13 ಕುರಿಗಳು ಬಲಿಯಾದವು.

ಈ ಕುರಿಗಳು ಗ್ರಾಮದ ಎನ್. ಲಿಂಗಪ್ಪ ಎಂಬ ರೈತರಿಗೆ ಸೇರಿದ್ದವು. ತೀವ್ರ ಗಾಯಗೊಂಡ ಕುರಿಗಳ ಪೈಕಿ 13 ಕುರಿಗಳು ಮೃತಪಟ್ಟಿದ್ದು, ರೈತರಿಗೆ ಸುಮಾರು ₹1.2 ಲಕ್ಷ ನಷ್ಟವಾಗಿದೆ.

ಈ ಘಟನೆ ಗ್ರಾಮದ ಜನರಲ್ಲಿ ಭೀತಿಯ ವಾತಾವರಣ ಮೂಡಿಸಿದ್ದು, ವನ್ಯಜೀವಿಗಳ ದಾಳಿ ನಿಯಂತ್ರಿಸಲು ಹಾಗೂ ಜನ್ಮಸುಸ್ತು ಜಾನುವಾರುಗಳನ್ನು ರಕ್ಷಿಸಲು ಅರಣ್ಯ ಇಲಾಖೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

– ಸಿದ್ದಿ ಟಿವಿ ವರದಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">