Kampli : ಸಮಾಜ ಸೇವೆಯ ಮಾದರಿಯಾದ ಮಂಗಳಮುಖಿ ರಾಜಮ್ಮ ರವರಿಗೆ ಪಿಐ ವಾಸುಕುಮಾರ್ ರವರಿಂದ ಗೌರವ ಸನ್ಮಾನ


ಸಮಾಜ ಸೇವೆಯ ಮಾದರಿಯಾದ ಮಂಗಳಮುಖಿ ರಾಜಮ್ಮ ರವರಿಗೆ ಪಿಐ ವಾಸುಕುಮಾರ್ ರವರಿಂದ ಗೌರವ ಸನ್ಮಾನ

ಕಂಪ್ಲಿ, ಜುಲೈ 13: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ಮಂಗಳಮುಖಿ ಸಮುದಾಯದ ರಾಜಮ್ಮ ರವರು ತಮ್ಮ ಜೀವನದ ದೈನಂದಿನ ಭಿಕ್ಷೆಯಿಂದ ಉಳಿತಾಯ ಮಾಡಿದ ಹಣವನ್ನು ಮಾನವೀಯ ಸೇವೆಗೆ ಬಳಸಿಕೊಂಡು, ಸಮಾಜಕ್ಕೆ ಮಾದರಿಯಾದಿದ್ದಾರೆ.

ಸುಮಾರು ₹60,000 ವೆಚ್ಚದಲ್ಲಿ ಗ್ರಾಮದ ಸರ್ಕಾರಿ ಶಾಲೆಯ 150 ವಿದ್ಯಾರ್ಥಿಗಳಿಗೆ ಬ್ಯಾಗ್, ಪ್ಯಾಂಟ್ ಮತ್ತು ಟಿ-ಶರ್ಟ್‌ಗಳನ್ನು ದಾನವಾಗಿ ನೀಡಿದ ರಾಜಮ್ಮ ಅಕ್ಕನ ಈ ಉದಾತ್ತ ಕಾರ್ಯ ಸಮಾಜದಲ್ಲಿ ನಿಜವಾದ ಸೇವಾಭಾವನೆಯ ಪ್ರತೀಕವಾಗಿದೆ.

ಅವರ ಸೇವೆಯನ್ನು ಗೌರವಿಸಿ, ಕಂಪ್ಲಿ ಪೊಲೀಸ್ ಠಾಣೆಯ ಪಿ.ಐ. ವಾಸುಕುಮಾರ್ ರವರು ರಾಜಮ್ಮ ರವರನ್ನು ಸನ್ಮಾನಿಸಿ ಗೌರವಿಸಿದರು.

"ರಾಜಮ್ಮ ರವರು ತೋರಿದ ದಾನಶೀಲತೆ ಮತ್ತು ಸಮಾಜದ ಮೇಲಿನ ಬದ್ಧತೆ ಎಲ್ಲರಿಗೂ ಪ್ರೇರಣೆಯಾಗಿದೆ. ಸಮಾಜದಲ್ಲಿ ಬದಲಾವಣೆ ತರಲು ಹಣದ ದೊಡ್ಡ ಪ್ರಮಾಣವಿಲ್ಲದೆ ಕೂಡ ಮನಸ್ಸು ಇದ್ದರೆ ಸಾಕು ಎಂಬುದಕ್ಕೆ ಅವರು ನಿಜವಾದ ಉದಾಹರಣೆ." – ಪಿಐ ವಾಸುಕುಮಾರ್

ಈ ಸನ್ಮಾನ ಕಾರ್ಯಕ್ರಮದಲ್ಲಿ ಕಂಪ್ಲಿ ಠಾಣೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

#SiddiTV #Rajamma #KampliNews #SocialService #Ballari #kamplipolice

-Siddi TV Raghuveer

Previous Post Next Post

Contact Form

f="https://unpkg.com/video.js/dist/video-js.css" rel="stylesheet">