Kampli: ಜವುಕು ಗ್ರಾಮದಲ್ಲಿ ಕೃಷಿಹೊಂಡದಿಂದ ಮೊಸಳೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ


ಜವುಕು ಗ್ರಾಮದಲ್ಲಿ ಕೃಷಿಹೊಂಡದಿಂದ ಮೊಸಳೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ

ಕಂಪ್ಲಿ: ತಾಲ್ಲೂಕಿನ ಜವುಕು ಗ್ರಾಮದ ಸರ್ವೇ ನಂಬರ್ 100 ರ ಇಟಗಿ ಕರಿಯಪ್ಪ ಅವರ ಕೃಷಿ ಜಮೀನಿನ ಹೊಂಡದಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯನ್ನು ಇಂದು ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿ ಹಿಡಿದಿದ್ದಾರೆ.

ಈ ಕಾರ್ಯಾಚರಣೆಯನ್ನು ಪ್ರಾದೇಶಿಕ ವಲಯ ಹೊಸಪೇಟೆಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿ ಅವರ ಅನುಮತಿಯೊಂದಿಗೆ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ವೀರೇಶ್ ಮಾಶೆಟ್ಟಿ, ಗಸ್ತು ಅರಣ್ಯ ಪಾಲಕ ರವಿಚಂದ್ರ ಹಾಗೂ ಸ್ಥಳೀಯ ಪರಿಣತಿಯಾದ ಮೊಸಳೆ ಮಲ್ಲಯ್ಯ ಭಾಗವಹಿಸಿದ್ದರು.

ಹೊಂಡದಲ್ಲಿದ್ದ ಮೊಸಳೆ ಸ್ಥಳೀಯ ರೈತರಲ್ಲಿ ಆತಂಕ ಉಂಟುಮಾಡಿತ್ತು. ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಮೊಸಳೆಯನ್ನ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ಮಾಡಿದ್ದಾರೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">