
ಐವತ್ತು ವರ್ಷಗಳ ಬಳಿಕ ಸಿರಿಗೇರಿ ಸಹಕಾರಿ ಸಂಘದಲ್ಲಿ ಚುನಾವಣಾ ಕಾವು: ಫಲಿತಾಂಶ ಮದ್ಯರಾತ್ರಿ ಪ್ರಕಟ!
(ಅಣ್ಣಯ್ಯ ಸ್ವಾಮಿ, ಸಿದ್ದಿ ಟಿವಿ, ಕುರುಗೋಡು) ಸಿರಿಗೇರಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯು ಈ ಬಾರಿ ಐವತ್ತು ವರ್ಷಗಳ ಬಳಿಕ ಸ್ಪರ್ಧಾತ್ಮಕವಾಗಿ ನಡೆಯಿತು. ಹಿಂದೆ ಯಾವಾಗಲೂ ಅವಿರೋಧ ಆಯ್ಕೆಯಾಗುತ್ತಿದ್ದ ಈ ಚುನಾವಣೆ, ಈ ಬಾರಿ ಜಿದ್ದಾಜಿದ್ದಿನಿಂದ ಭರಿತವಾಗಿದ್ದು ವಿಧಾನಸಭೆ ಮಟ್ಟದ ಕಾವು ಕಂಡಿತು. ಶುಕ್ರವಾರ ರಾತ್ರಿ 11 ಗಂಟೆಗೆ ಫಲಿತಾಂಶ ಪ್ರಕಟವಾಯಿತು.ಚುನಾವಣಾ ಅಧಿಕಾರಿ ಜಿ.ಎಸ್. ಸುಧೀಂದ್ರ ಅವರು ಫಲಿತಾಂಶ ಪ್ರಕಟಿಸಿದರು. ವಿವಿಧ ಹುದ್ದೆಗಳ ಫಲಿತಾಂಶ ಹೀಗಿದೆ:🗳️ ಸಿರಿಗೇರಿ ಸಹಕಾರಿ ಸಂಘ – ಚುನಾವಣಾ ಫಲಿತಾಂಶ
ಸಾಮಾನ್ಯ ಕ್ಷೇತ್ರ (ಸಾಲಗಾರ)
ಡಿ. ಚನ್ನಪ್ಪ
213 ಮತಗಳು
ಬಿ. ಸೋಮಶೇಖರಪ್ಪ
211 ಮತಗಳು
ಎಸ್.ಎಂ. ನಾಗರಾಜಸ್ವಾಮಿ
205 ಮತಗಳು
ಸುಗ್ನಳ್ಳಿ ರುದ್ರಪ್ಪ
202 ಮತಗಳು
ಬಿ. ವೀರೇಶ್
169 ಮತಗಳು
ಹಿಂದುಳಿದ ವರ್ಗ (ಎ)
ಗರ್ಜಲಿಂಗಪ್ಪ
213 ಮತಗಳು
ಹಿಂದುಳಿದ ವರ್ಗ (ಬಿ)
ಹಾಗಲೂರು ಮಲ್ಲನಗೌಡ
239 ಮತಗಳು
ಪರಿಶಿಷ್ಟ ಜಾತಿ
ಭಜಂತ್ರಿ ರಮೇಶ್
177 ಮತಗಳು
ಪರಿಶಿಷ್ಟ ಪಂಗಡ
ಬಿ. ಮಲ್ಲಯ್ಯ ನಾಯಕ್
192 ಮತಗಳು
ಮಹಿಳಾ ಕ್ಷೇತ್ರ
ಜಿ. ಗೌರಮ್ಮ
213 ಮತಗಳು
ಐ. ಜಲಜಾಕ್ಷಮ್ಮ
193 ಮತಗಳು
ಸಾಮಾನ್ಯ (ಸಾಲಗಾರರಲ್ಲದ) ಕ್ಷೇತ್ರ
ಕೆ. ಶಿವಪ್ಪ
91 ಮತಗಳು
ಹೀಗಾಗಿ ಒಟ್ಟು 13 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.