ದ್ವಿತೀಯ ಪಿಯುಸಿ ಫಲಿತಾಂಶ: ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶ್ಲಾಘನೀಯ ಸಾಧನೆ
ಕಂಪ್ಲಿ | ಏಪ್ರಿಲ್ 9
2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಂಪ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ ಮಾಡಿದೆ.
ಕಾಲೇಜಿನ ಪ್ರಾಂಶುಪಾಲರಾದ ಸಿದ್ದಣ್ಣ ಪರಮೇಶ್ವರ್ ಮಾತನಾಡಿ, ವಿವಿಧ ವಿಭಾಗಗಳ ಫಲಿತಾಂಶದ ವಿವರಗಳನ್ನು ಹಂಚಿಕೊಂಡರು.
ವಿಭಾಗವಾರು ಫಲಿತಾಂಶ:
- ಕಲಾ ವಿಭಾಗ: 52ರಲ್ಲಿ 28 ಉತ್ತೀರ್ಣ — 53.84%
- ವಾಣಿಜ್ಯ ವಿಭಾಗ: 14ರಲ್ಲಿ 12 ಉತ್ತೀರ್ಣ — 85.71%
- ವಿಜ್ಞಾನ ವಿಭಾಗ: 27ರಲ್ಲಿ 13 ಉತ್ತೀರ್ಣ — 48.14%
ಒಟ್ಟಾರೆ 93 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 53 ಮಂದಿ ಉತ್ತೀರ್ಣರಾಗಿ 56.99% ಫಲಿತಾಂಶ ದಾಖಲಾಗಿದೆ.
ಈ ಬಾರಿ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಫಲಿತಾಂಶ ದೊರೆತಿರುವುದು ವಿಶೇಷವೆಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳು:
ಕಲಾ ವಿಭಾಗ:
ಸುಧಾಕರ್ – 560/600 (93.33%)
ಶ್ರೀಕಾಂತ್ – 542/600 (87.33%)
ಮೌನೇಶ್ – 517/600 (86.16%)
ವಾಣಿಜ್ಯ ವಿಭಾಗ:
ಆಂಜಿನಯ್ಯ – 525/600 (87.05%)
ರಾಜೇಶ್ – 504/600 (84%)
ವಿಜ್ಞಾನ ವಿಭಾಗ:
ಸ್ಮಿತಾ ಬಿ – 530/600 (88.33%)
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
"ಈ ಬಾರಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಂದುಕೊಟ್ಟಿದ್ದು, ಉಪನ್ಯಾಸಕರ ಗುಣಮಟ್ಟದ ಶಿಕ್ಷಣವನ್ನು ಪ್ರತಿಬಿಂಬಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆಗಳೊಂದಿಗೆ ಖಾಸಗಿ ಕಾಲೇಜುಗಳಿಗೆ ಸ್ಪರ್ಧೆ ನೀಡಲಿ ಎಂಬುದು ಸಿದ್ದಿ ಟಿವಿಯ ಆಶಯ."
Reported by Siddi TV Raghuveer (6360633266)
WWW.SIDDITV.COM
