Kampli : ಜೆಸಿಐ ವತಿಯಿಂದ ತಾತ್ಕಾಲಿಕ ಬಸ್ ಶೆಲ್ಟರ್ ಉದ್ಘಾಟನೆ



ಜೆಸಿಐ ವತಿಯಿಂದ ತಾತ್ಕಾಲಿಕ ಬಸ್ ಶೆಲ್ಟರ್ ಉದ್ಘಾಟನೆ

📍 ಕಂಪ್ಲಿ

ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿ, ಸಮಾಜ ಸೇವೆಯ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವುದು ಜೆಸಿಐ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಜೆ ಎಫ್ ಎಸ್ ಸುರೇಶ್ ಗೊಂಪಾ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಸಮೀಪ ಜೆಸಿಐ ಕಂಪ್ಲಿ ಸೋನಾ ಘಟಕದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ತಾತ್ಕಾಲಿಕ ಬಸ್ ತಂಗುದಾಣ ಹಾಗೂ ಪೇಟೆ ಬಸವೇಶ್ವರ ದೇವಸ್ಥಾನದ ಬಳಿಯ ನೀರಿನ ಅರವಟ್ಟಿಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸೇವೆಯೇ ಸಂಘಟನೆಯ ಪ್ರಮುಖ ಧ್ಯೇಯವಾಗಿದ್ದು, ಬಿಸಿಲಿನ ತಾಪದಿಂದ ಪ್ರಯಾಣಿಕರಿಗೆ ನೆರಳಿನ ವ್ಯವಸ್ಥೆ ಒದಗಿಸುವ ಉದ್ದೇಶದಿಂದ ಈ ತಾತ್ಕಾಲಿಕ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ಇಂತಹ ಸಣ್ಣ ಪ್ರಯತ್ನಗಳು ಜನರ ದೈನಂದಿನ ಜೀವನದಲ್ಲಿ ದೊಡ್ಡ ಬದಲಾವಣೆ ತರಬಲ್ಲವು ಎಂದು ಅಭಿಪ್ರಾಯಪಟ್ಟರು.

ಜೆಸಿಐ ಕಂಪ್ಲಿ ಸೋನಾ ಅಧ್ಯಕ್ಷ ಭರತ್ ಪದ್ಮಶಾಲಿ ಮಾತನಾಡಿ, ಸಂಸ್ಥೆಯು ಸದಾ ಸಮಾಜಮುಖಿ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿದ್ದು, ಸಾರ್ವಜನಿಕರ ಅಗತ್ಯಗಳನ್ನು ಮನಗಂಡು ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಮಲ್ಲಿಕಾರ್ಜುನ, ಜೆಸಿಐ ವಲಯ 24ರ ಅಧ್ಯಕ್ಷ ಜೆಎಫ್‌ಎಸ್ ಸಿಎ ಮಧುಸೂದನ್ ಸೇರಿದಂತೆ ಪ್ರಮುಖರಾದ ಡಾ. ಬಿ. ಸುಧಾಕರ್, ಬಿ.ಎಸ್. ಅರುಂಧತಿ, ಜೆಸಿ ಅಖಿಲ್ ಅಕ್ಕಿ, ಜೆಸಿ ಪ್ರಸಾದ್ ಗಡದ್, ಬಿ. ರಸೂಲ್, ನಿರಂಜನ್ ಗುಪ್ತಾ, ಡಿ. ಮೌನೇಶ್, ಚಂದ್ರಶೇಖರ್ ಗೌಡ, ರಮೇಶ್ ಬೆಳಂಕರ್, ರಾಕೇಶ್ ಬಾಗ್ರೇಚಾ, ಇಂದ್ರಜಿತ್ ಸಿಂಗ್, ಬಡಿಗೇರ್ ಜೀಲನ್, ಮಂಜೇಶ್ ದಾರೋಜಿ, ಡಾ. ಶ್ರದ್ಧಾ ಭರತ್, ಗುರುಶಾಂತ ಶಾಸ್ತ್ರಿ ಉಪಸ್ಥಿತರಿದ್ದರು.


✍️ ವರದಿ: ಸಿದ್ದಿ ಟಿವಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">