ಮುಖ್ಯ ಶಿಕ್ಷಕ ಯು. ಶ್ರೀನಿವಾಸ್ ರವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ
ಕಂಪ್ಲಿ ಸಮೀಪದ ಎಂ ಸೂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಯು. ಶ್ರೀನಿವಾಸ್ ಅವರ ವಯೋನಿವೃತ್ತಿ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭ ಸೋಮವಾರ ಅದ್ಧೂರಿಯಾಗಿ ಜರಗಿತು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಮಹಾಬಲೇಶಪ್ಪ ಮಾತನಾಡಿ ಶ್ರೀನಿವಾಸ್ ಅವರು ಬಹಳ ಸರಳ ಸಜ್ಜನಿಕೆ ವ್ಯಕ್ತಿ, ಪರಿಣಾಮಕಾರಿಯಾದ ಪಾಠ ಬೋಧನೆ ಮೂಲಕ ಎಲ್ಲಾ ವಿದ್ಯಾರ್ಥಿಗಳ ಮನಸ್ಸು ಗೆದ್ದ ಉತ್ತಮ ಶಿಕ್ಷಕ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್. ರಾಮಪ್ಪ ಮಾತಾಡಿ ಶ್ರೀಯುತ ಶ್ರೀನಿವಾಸ ಸಾರ್ ರವರು ಬೀದರ್ ನ ಹುಮ್ನಾಬಾದಿನ ಹಳ್ಳಿಕೇಡು ಗ್ರಾಮದಲ್ಲಿ 1992 ರಲ್ಲಿ ವೃತ್ತಿ ಜೀವನ ಆರಂಭಿಸಿ ಇವರು ಸತತ 3 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮಕ್ಕೆ 1995 ರಲ್ಲಿ ವರ್ಗಾವಣೆಯಾಗಿ ಬಂದು ಸರಿ ಸುಮಾರು 18 ವರ್ಷಗಳ ಕಾಲ ಸೇವೆ ಸಲ್ಲಿಸಿ, 2012ರಲ್ಲಿ ಮುಖ್ಯಗುರುಗಳಾಗಿ ಸಿರುಗುಪ್ಪ ತಾಲೂಕಿನ ಸಿರುಗುಪ್ಪ ಗ್ರಾಮದ ಎಂ ಸೂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ನಿಯೋಜನೆಯಾದರು ತಮ್ಮ ಅವಧಿಯಲ್ಲಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಸಹ ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಯು. ಶ್ರೀನಿವಾಸ್ ರವರ ದಂಪತಿಗಳನ್ನು 1997-98ನೇ ಸಾಲಿನಲ್ಲಿ ಶಿಕ್ಷಣ ಕಲಿತ ವಿದ್ಯಾರ್ಥಿ ತಂಡದಿಂದ ಹಾಗೂ ಶಾಲೆಯ ವತಿಯಿಂದ ಹಳೇ ವಿದ್ಯಾರ್ಥಿಗಳು ಸೇರಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳು ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರಾದ ಕುಮಾರ ಸ್ವಾಮಿ, ರಾಜಕುಮಾರ, ಜಡಪ್ಪ, ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.