ಕಂಪ್ಲಿ ಪಟ್ಟಣದ 2ನೇ ವಾರ್ಡ್ ನ ಜನವಸತಿ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ,ಸ್ಥಳೀಯರು ಮೊಬೈಲ್ ನಲ್ಲಿ ಸೆರೆ
ಮೊಸಳೆ ವಿಡಿಯೋ ನೋಡಲು ಕ್ಲಿಕ್ ಮಾಡಿ
ಕಂಪ್ಲಿಯ ಜೋಗೆ ಕಾಲುವೆ, ಆದೋನಿ ಮಸೀದಿ ಕಾಲುವೆ ಹಾಗೂ ಶಂಭುಲಿಂಗೇಶ್ವರ ಶಾಲೆ ಹಿಂಭಾಗದ ಕಾಲುವೆಯಲ್ಲಿ ಮೊಸಳೆಗಳ ಚಲನವಲನ
ಕಂಪ್ಲಿ : ಪಟ್ಟಣದ 2ನೇ ವಾರ್ಡ್ ನಲ್ಲಿ ಇರುವ ಕಾಲುವೆಯ ದಡದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಕಳೆದ ವಾರ ಸಹ ಮೊಸಳೆಯೊಂದು ಇದೇ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಅದರ ಬೆನ್ನಲ್ಲೇ ಇಂದು ಮತ್ತೊಂದು ಮೊಸಳೆ ಕಾಣಿಸಿಕೊಂಡಿದೆ.
ಸ್ಥಳೀಯರು ಮಾಹಿತಿ ಪ್ರಕಾರ, ಈ ಪ್ರದೇಶದಲ್ಲಿ ಸುಮಾರು 3 ಮೊಸಳೆಗಳನ್ನು ನಾವು ನೋಡಿದ್ದೇವೆ,ಇದು ಜನವಸತಿ ಪ್ರದೇಶವಾಗಿದ್ದು,ಪಕ್ಕದಲ್ಲೇ ಮಸಿದಿ ಶಾಲೆಗಳು ಇದ್ದು, ಪ್ರತಿನಿತ್ಯ ಮಕ್ಕಳು, ಮಹಿಳೆಯರು ಸಂಚಾರಿಸುವ ಮಾರ್ಗವಾಗಿದ್ದು, ಸದ್ಯ ಮೊಸಳೆಯ ಪ್ರತ್ಯಕ್ಷತೆಯಿಂದ ಆತಂಕದಲ್ಲಿದ್ದಾರೆ ಎಂದರು.
ಇನ್ನು ಸಂಬಂಧಿಸಿದ ಅರಣ್ಯ ಇಲಾಖೆಯವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಮೊಸಳೆಯನ್ನು ಸ್ಥಳಾಂತರಿಸಬೇಕಾಗಿದೆ ಎಂಬ ಸ್ಥಳೀಯ ಮನವಿಗೆ ಅರಣ್ಯ ಇಲಾಖೆಯು ಸ್ಪಂದಿಸಿ, ಶೀಘ್ರದಲ್ಲೇ ಮೊಸಳೆಗಳನ್ನು ಹಿಡಿಯುವ ಕಾರ್ಯಚರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.