ತುಂಗಭದ್ರಾ ನದಿಯಲ್ಲಿ ಹುಚ್ಚಾಟ – ಯುವಕನನ್ನು ಪತ್ತೆ ಹಚ್ಚಿ, ಕಾನೂನು ಕ್ರಮಕ್ಕೆ ಒಳಪಡಿಸಿದ ಪೊಲೀಸರು
ನದಿಯಲ್ಲಿ ಈಜು – ನಿಷೇಧವಿದ್ದರೂ ಹುಚ್ಚಾಟ
ತುಂಗಭದ್ರಾ ಜಲಾಶಯದಿಂದ ಕಂಪ್ಲಿ ನದಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ನದಿಯಲ್ಲಿ ಈಜು ಅಥವಾ ಇಳಿಯುವುದು ಸಂಪೂರ್ಣ ನಿಷೇಧಿತವಾಗಿತ್ತು. ಸಾರ್ವಜನಿಕರ ಸುರಕ್ಷತಿಗಾಗಿ ಈ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಸೂಚನೆ ನೀಡಲಾಗಿತ್ತು.
ಸಿದ್ದಿ ಟಿವಿ ವರದಿಗೆ ಪೊಲೀಸರು ಸ್ಪಂದನೆ
ಈ ನಡುವೆಯೇ ಯುವಕನೊಬ್ಬ ನದಿಗೆ ಇಳಿದು, ಪಲ್ಟಿ ಹೊಡೆದು ಈಜಾಡುತ್ತಿದ್ದ ದೃಶ್ಯ ಸಿದ್ದಿ ಟಿವಿಯ ಮೂಲಕ ಪ್ರಕಟವಾಯಿತು. ಇದರ ಬೆನ್ನಲ್ಲೇ ಕಂಪ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಯುವಕನನ್ನು ಪತ್ತೆ ಹಚ್ಚಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ವಿಚಾರಣೆ ಮತ್ತು ದಂಡ
ತಕ್ಷಣದ ವಿಚಾರಣೆ ಬಳಿಕ ಯುವಕನಿಗೆ ದಂಡ ವಿಧಿಸಿ, ಕಟ್ಟುನಿಟ್ಟಾಗಿ ಬುದ್ದಿ ಹೇಳಿ ಮನೆಗೆ ಕಳುಹಿಸಲಾಯಿತು.
ಸಿದ್ದಿ ಟಿವಿಯ ಉದ್ದೇಶ
ಈ ವರದಿಯ ಮುಖ್ಯ ಉದ್ದೇಶ – ಸಾರ್ವಜನಿಕರ ಜೀವ ರಕ್ಷಣೆಗಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸೂಚನೆಗಳನ್ನು ಗೌರವಿಸಬೇಕೆಂಬ ಎಚ್ಚರಿಕೆಯನ್ನು ಜನರಿಗೆ ತಲುಪಿಸುವುದು. ಯಾವುದೇ ಆಪತ್ತಿನ ಸಂದರ್ಭದಲ್ಲಿಯೂ, ಆಡಳಿತ ಹಾಗೂ ಕಾನೂನು ವ್ಯವಸ್ಥೆಯ ನಿರ್ದೇಶನಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ ಎಂಬುದನ್ನು ನೆನಪಿಸಲು ಈ ವರದಿ ಕಾರಣವಾಗಿದೆ.
[ಕಂಪ್ಲಿ ಪೊಲೀಸರಿಗೆ ಈ ಮೂಲಕ ಸಿದ್ದಿ ಟಿವಿ ಮೆಚ್ಚುಗೆ ವ್ಯಕ್ತಪಡಿಸುತ್ತೆ]