Kurugodu : ನರೇಗಾ ನೌಕರರ ವೇತನ ಪಾವತಿ ವಿಳಂಬ, ನಗರದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದ ನರೇಗಾ ನೌಕರರು


ನರೇಗಾ ನೌಕರರ ವೇತನ ಪಾವತಿ ವಿಳಂಬ, ನಗರದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದ ನರೇಗಾ ನೌಕರರು

ಕುರುಗೋಡು:
ಕಂಪ್ಲಿ ಮತ್ತು ಕುರುಗೋಡು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನರೇಗಾ ಯೋಜನೆಯ ಗ್ರಾಮ ಮತ್ತು ತಾಲೂಕು ಮಟ್ಟದ ನೌಕರರು ಕಳೆದ ಆರು ತಿಂಗಳಿನಿಂದ ವೇತನ ಪಾವತಿಯಾಗದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ನೌಕರರ ಪ್ರತಿನಿಧಿಗಳು ಇಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜೆ.ಎನ್. ಗಣೇಶ್ ಅವರನ್ನು ಭೇಟಿ ಮಾಡಿ, ತಮ್ಮ ಸಂಕಷ್ಟ ವಿವರಿಸಿ ವೇತನ ಪಾವತಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ನೌಕರರ ವೇತನ ಪಾವತಿಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬ ಮನವಿಯನ್ನು ಶಾಸಕರ ಮುಖಾಂತರ ಸಂಬಂಧಪಟ್ಟ ಆರ್‌ಡಿಪಿಆರ್‌ ಸಚಿವರು ಹಾಗೂ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ನರೇಗಾ ನೌಕರರ ಸಂಘದ ಪ್ರಮುಖರು ಹಾಗೂ ನೌಕರರು ಉಪಸ್ಥಿತರಿದ್ದರು:

  • H ಹನುಮೇಶ್ – ಜಿಲ್ಲಾ ಕಾರ್ಯದರ್ಶಿ
  • ಸಂಗಮೇಶ್ TC – ಜಿಲ್ಲಾ ಪ್ರಧಾನ ಕಾರ್ಯದರ್ಶಿ
  • ಮಲ್ಲಿಕಾರ್ಜುನ, ಚಂದ್ರಶೇಖರ (TIEC)
  • ಬಿ ಸಿದ್ದೇಶ್ವರ, ಮುಕ್ತಯಕ್ಕ (MIS ಸಂಯೋಜಕರು)
  • ಅರುಣಾಜ್ಯೋತಿ, ಲೋಕೇಶ್, ತಿಪ್ಪೇಶ್, ಬಸವರಾಜ, ಆಂಜಿನೇಯ (ತಾಂತ್ರಿಕ ಸಹಾಯ)
  • ವೀಣಾ (AA), ಕನಕರಾಯ
  • ಚನ್ನವೀರ, ಭಾಷಾ, ಪಂಪಾಪತಿ, ರಫೀಕ್, ರಾಘವೇಂದ್ರ, ಹೊನ್ನೂರ, ಮರೇಶ್, ಹನುಮಂತ
  • ಶಿಲ್ಪಾ, ಹೊನ್ನೂರಮ್ಮ, ಮಂಜುಳಾ, ಸುಣಗಾರ ರೇಣುಕಮ್ಮ, ರಂಜನಿ, ಅಮೃತಾ

Reported By: Raghuveer, Siddi TV, Kampli (6360633266)

Previous Post Next Post

Contact Form

f="https://unpkg.com/video.js/dist/video-js.css" rel="stylesheet">