Siddi TV – E News
ಕಂಪ್ಲಿ – 4ನೇ ವಾರ್ಡ್ ಪುರಾತನ ಬಾವಿ ಸ್ವಚ್ಛಗೊಳಿಸಬೇಕೆಂದು ಆಗ್ರಹ
ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ 4ನೇ ವಾರ್ಡ್ ಬಸವೇಶ್ವರ ನಗರದಲ್ಲಿರುವ ಕೆಂಚಮ್ಮ ದೇವಾಲಯದ ಪಕ್ಕದ ಪುರಾತನ ಬಾವಿ ಹಲವು ವರ್ಷಗಳಿಂದ ಪಾಳು ಬಿದ್ದಿದ್ದು, ಅಸುರಕ್ಷಿತ ಸ್ಥಿತಿಗೆ ತಲುಪಿದೆ.
ಈ ಹಿನ್ನೆಲೆಯಲ್ಲಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ರುದ್ರಮುನಿ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಪುರಸಭೆಗೆ ಮನವಿ ಸಲ್ಲಿಸಿ, ತಕ್ಷಣ ಸ್ವಚ್ಛಗೊಳಿಸುವಂತೆ ಆಗ್ರಹಿಸಿದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಅವರು, “ಬಾವಿಯನ್ನು ಆದಷ್ಟು ಬೇಗ ಸ್ವಚ್ಛಗೊಳಿಸಲಾಗುವುದು. ಪುರಾತನ ಬಾವಿ, ಶಾಸನಗಳು ಮತ್ತು ಇತಿಹಾಸಿಕ ಸ್ಥಳಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ,” ಎಂದು ತಿಳಿಸಿದರು.
© 2025 Siddi TV