ರಾಮಸಾಗರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ
ರಾಮಸಾಗರ ಗ್ರಾಮದಲ್ಲಿ ಇಂದು ಯೋಜನೆ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ 78 ಜೋಡಿ ಪೂಜೆಯಲ್ಲಿ ಭಾಗವಹಿಸಿದರು.
ಸದ್ರಿ ಕಾರ್ಯಕ್ರಮಕ್ಕೆ ಗ್ರಾಮದ ಗಣ್ಯರಾದ ಹೆಚ್. ಶಿವಶಂಕರಗೌಡ ಅಧ್ಯಕ್ಷತೆ ವಹಿಸಿದರು. ಉದ್ಘಾಟಕರಾಗಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಜೆ. ಚಂದ್ರಶೇಖರ ದೀಪ ಬೆಳಗಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬಳ್ಳಾರಿ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷ, ಕರ್ನಾಟಕ ಗ್ರಾಮೀಣ ಬ್ಯಾಂಕ್ ರಾಮಸಾಗರ ಶಾಖೆಯ ಮ್ಯಾನೇಜರ್ ಬಿ. ರವಿ ಉಪಸ್ಥಿತರಿದ್ದರು.
ಗೌರವ ಅತಿಥಿಗಳಾಗಿ ಎಂ. ಆಶಾ, ಪೂಜಾ ಸಮಿತಿ ಅಧ್ಯಕ್ಷ ಬಿ.ನಾರಾಯಣಪ್ಪ, ಹೆಚ್. ಜಗನ್ನಾಥ ಗೌಡ, ಟಿಎಂ. ಸಾವಿತ್ರಮ್ಮ, ಎ. ಮಹೇಶ್, ಡಿ.ಕೃಷ್ಣಪ್ಪ, ಹೆಚ್. ಲಿಂಗೇಶ್, ಹೆಚ್.ಜಗದೀಶ್ ಪೂಜಾರಿ, ಪಿ.ಮುಕ್ಕಣ್ಣ, ಪ್ರವೀಣ್ ಪಾಟೀಲ್, ತಾಲೂಕಿನ ಯೋಜನಾಧಿಕಾರಿ ರಾಘವೇಂದ್ರ ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿದರು.