Kampli: ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹೊಸ ನೆಲ್ಲೂಡಿ ಶಾಲೆ ಅದ್ಭುತ ಪ್ರದರ್ಶನ



ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹೊಸ ನೆಲ್ಲೂಡಿ ಶಾಲೆ ಅದ್ಭುತ ಪ್ರದರ್ಶನ

ಕಂಪ್ಲಿ, ಆ.20

ಕಂಪ್ಲಿ ತಾಲೂಕಿನ ಎಮ್ಮಿಗನೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣ ಸಮೀಪದ ಹೊಸ ನೆಲ್ಲೂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ-ಬಾಲಕಿಯರ ಥ್ರೋಬಾಲ್ ತಂಡಗಳು ಚಾಂಪಿಯನ್ ಪಟ್ಟ ಗೆದ್ದು ವಿಶೇಷ ದಾಖಲೆಯನ್ನು ಬರೆದಿವೆ.

ಈ ಶಾಲೆಯು 2011-12ನೇ ಸಾಲಿನಿಂದ ಇಂದಿನವರೆಗೂ ಸತತ ಜಯಗಳಿಸುವ ಮೂಲಕ ವಲಯ ಮಟ್ಟದಲ್ಲಿ ಅಪ್ರತಿಹತ ಪಾರುಪತ್ಯ ಮೆರೆದಿದೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಚಾಂಪಿಯನ್ ಪಟ್ಟ ಕಾಯ್ದುಕೊಂಡಿರುವ ಏಕೈಕ ಕನ್ನಡ ಮಾಧ್ಯಮ ಶಾಲೆ ಎಂಬ ಗೌರವಕ್ಕೂ ಪಾತ್ರವಾಗಿದೆ.

ಶಾಲೆಯ ಮುಖ್ಯಗುರು ಬಿ. ಚಂದ್ರಶೇಖರ್ ಮಾತನಾಡಿ, "ನಮ್ಮ ಶಾಲಾ ಮಕ್ಕಳು ವಲಯ ಮಟ್ಟದಲ್ಲಿ ಜಯ ಸಾಧಿಸಿ ಬಳ್ಳಾರಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಹಿಂದೆ 2016-17-18ರ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಚಾಂಪಿಯನ್ ಪಟ್ಟ, ವಿಭಾಗ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿವೆ" ಎಂದು ಹೇಳಿದರು.

ಸಹಶಿಕ್ಷಕ ಹಾಗೂ ತಂಡ ನಿರ್ವಹಕರಾದ ಸರ್ವೇಶ್ ಅವರು, "ಆಟದ ಮೈದಾನ ಹಾಗೂ ಶಿಕ್ಷಕರ ಕೊರತೆ ಇದ್ದರೂ ಮುಖ್ಯಗುರುಗಳ ಪ್ರೋತ್ಸಾಹದಿಂದ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಹಿಂದಿನ ಕ್ರೀಡಾ ಶಿಕ್ಷಕರು ಹಾಕಿದ ಅಡಿಪಾಯವೇ ಇಂದಿನ ಯಶಸ್ಸಿಗೆ ಕಾರಣ" ಎಂದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಶಿಕ್ಷಕ ವರ್ಗ ಹಾಗೂ ಗ್ರಾಮಸ್ಥರು ಮಕ್ಕಳಿಗೆ ಶುಭ ಹಾರೈಸಿದರು. ತಂಡದ ಕೋಚ್‌ಗಳಾದ ಸಹಶಿಕ್ಷಕಿ ರಾಜೇಶ್ವರಿ, ಸುವರ್ಣ ಹಾಗೂ ಮಕ್ಕಳು ಉಪಸ್ಥಿತರಿದ್ದರು.


Previous Post Next Post

Contact Form

f="https://unpkg.com/video.js/dist/video-js.css" rel="stylesheet">