ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ
ಆಗಸ್ಟ್ 24, 2025 | ಕಲಬುರಗಿ
ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಟಿ ಎಚ್ ಎಂ ರಾಜಕುಮಾರ್ ಆಯ್ಕೆ
ಕರ್ನಾಟಕದಲ್ಲಿ ನೂತನವಾಗಿ ರೂಪುಗೊಂಡ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ರಾಜ್ಯ ಸಂಘ ನೊಂದಣಿ ಅಧಿನಿಯಮ 1960ರ ಅನುಸಾರ ನೊಂದಣಿಗಾಗಿ ಪೂರ್ವಭಾವಿ ಸಭೆಯನ್ನು ಆಯೋಜಿಸಿತು. ಸಭೆ ಆಗಸ್ಟ್ 24, 2025 ರವಿವಾರ ರಂದು ಕಲಬುರಗಿ ಜಿಲ್ಲೆ, ಹೋಟೆಲ್ ರಾಜರಾಜೇಶ್ವರಿ ಸಭಾಂಗಣದಲ್ಲಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳ, ತಾಲೂಕುಗಳು, ಹೋಬಳಿ ಹಾಗೂ ಗ್ರಾಮಗಳಿಂದ ಮಾಹಿತಿ ಹಕ್ಕು ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು, ಸಾಹಿತಿಗಳು, ವಕೀಲರು ಮತ್ತು ಸಮಾಜಸೇವಕರಾದವರು ಈ ಸಭೆಗೆ ಹಾಜರಿದ್ದರು.
ವೇದಿಕೆಯ ಪದಾಧಿಕಾರಿಗಳ ಆಯ್ಕೆ
- ರಾಜ್ಯ ಅಧ್ಯಕ್ಷ: ಚೆನ್ನಯ್ಯ ಮಲಕೈಯ ವಸ್ತ್ರದ್
- ರಾಜ್ಯ ಉಪಾಧ್ಯಕ್ಷ: ಇಸ್ಮೈಲ್ ಎಮ್ ಶೇಕ್
- ರಾಜ್ಯ ಕಾರ್ಯಾಧ್ಯಕ್ಷ: ಟಿ ಎಚ್ ಎಂ ರಾಜಕುಮಾರ್
- ರಾಜ್ಯ ಪ್ರಧಾನ ಕಾರ್ಯದರ್ಶಿ: ಎಂ ರಾಮಕೃಷ್ಣ
- ರಾಜ್ಯ ಕಾರ್ಯದರ್ಶಿ: ಮನೋಜ್ ಕುಮಾರ್
- ರಾಜ್ಯ ಸಂಘಟನಾ ಕಾರ್ಯದರ್ಶಿ: ಮಂಜಪ್ಪ ಎಂ ಹೆಚ್, ರಾಜೇಂದ್ರ ಪ್ರಸಾದ್
- ರಾಜ್ಯ ಖಜಾಂಚಿ: ಸೈಯದ್ ಮುಸಿನ್ ಅಲಿ
- ರಾಜ್ಯ ಮಾಧ್ಯಮ ಪ್ರತಿನಿಧಿ: ಸಂತೋಷ್ ಸಂಶಿ
ಎಲ್ಲಾ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಒಪ್ಪಿ ಆಯ್ಕೆ ಮಾಡಲಾಗಿದೆ.
ವೇದಿಕೆಯ ಗುರಿಗಳು ಮತ್ತು ಉದ್ದೇಶಗಳು
ಸಭೆಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಟಿ ಎಚ್ ಎಂ ರಾಜಕುಮಾರ್ ಅವರು ವೇದಿಕೆಯ ಮೂಲ ಧ್ಯೇಯಗಳು ಹಾಗೂ ಗುರಿಗಳನ್ನು ವಿವರಿಸಿದರು. ಸ್ವಾತಂತ್ರ್ಯ, ಸಹೋದರತೆ, ಸಮಾನತೆ, ಉದ್ಯೋಗ ಸೃಷ್ಟಿ, ಉಳಿತಾಯ ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದ ಪರವಾಗಿ ವೇದಿಕೆಯು, ಅದರ ಸದಸ್ಯರು ಸದಾ ಮುಂಚಣೆಯಲ್ಲಿ ಕೆಲಸ ಮಾಡಬೇಕೆಂದು ಹೇಳಿದರು. ವಿಶೇಷವಾಗಿ, ಮಹಿಳೆಯರ ಮತ್ತು ಶೋಷಿತರ ಹಕ್ಕುಗಳ ಉನ್ನತಿಗೆ ವೇದಿಕೆಯು ಸದಾ ತೊಡಗಿರಬೇಕು ಎಂಬುದನ್ನೂ ಅವರು ಗಮನ ಸೆಳೆದರು.
ಸಭೆಯನ್ನು ಶಾಂತಿಯುತವಾಗಿ ಮುಕ್ತಾಯಗೊಳಿಸಲಾಯಿತು.