Kampli : ಶಾಸಕ ಜೆ.ಎನ್ ಗಣೇಶ್ ರವರ ಆಪ್ತ ಸಹಾಯಕರ ಜನ್ಮದಿನ : ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ



ಕಂಪ್ಲಿಯಲ್ಲಿ ಧನರಾಜ್ ಜನ್ಮದಿನ: ಸರ್ಕಾರಿ ಶಾಲೆಯಲ್ಲಿ ಪಠ್ಯಸಾಮಗ್ರಿ ವಿತರಣೆ | Siddi TV

Siddi TV — Kampali Local News

ಬಳ್ಳಾರಿ / ಕಂಪ್ಲಿ • ಆವೃತ್ತಿ: August 26, 2025

ಕಂಪ್ಲಿಯಲ್ಲಿ ಶಾಸಕರ ಆಪ್ತ ಸಹಾಯಕ ಧನರಾಜ್ ಜನ್ಮದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಪಠ್ಯಸಾಮಗ್ರಿ ವಿತರಣೆ

ಕಂಪ್ಲಿ, ಬಳ್ಳಾರಿ: ಕಂಪ್ಲಿ ಕೋಟೆಯ 1ನೇ ವಾರ್ಡಿನ ತುಂಗಭದ್ರ ನದಿ ಸೇತುವೆ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಜೆ.ಎನ್. ಗಣೇಶ ಅವರ ಆಪ್ತ ಸಹಾಯಕ ಧನರಾಜ್ ಅವರ ಜನ್ಮದಿನದ ಪ್ರಯುಕ್ತ ಅಭಿಮಾನಿ ಬಳಗದ ವತಿಯಿಂದ ಉಚಿತವಾಗಿ ನೋಟ್‌ಬುಕ್, ಪೆನ್ ಮತ್ತು ಪೆನ್ಸಿಲ್‌ಗಳನ್ನು ವಿತರಿಸಲಾಯಿತು.

ಯುವ ಮುಖಂಡ ಎಸ್. ರುದ್ರಮುನಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ: “ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣದೊಂದಿಗೆ ಅಗತ್ಯ ಸೌಲಭ್ಯಗಳೂ ಲಭ್ಯವಿವೆ. ಇಲ್ಲಿನ ಶಿಕ್ಷಕರು ಮಕ್ಕಳ ಭವಿಷ್ಯ ಕಟ್ಟಲು ಶ್ರಮಿಸುತ್ತಿದ್ದಾರೆ. ಪೋಷಕರು ಮಕ್ಕಳನ್ನು ನಿಯಮಿತವಾಗಿ ಶಾಲೆಗೆ ಕಳುಹಿಸಲಾಗುವುದು” ಎಂದು ಹೇಳಿದರು.

ಒಟ್ಟು 46 ವಿದ್ಯಾರ್ಥಿಗಳಿಗೆ ಪಠ್ಯಸಾಮಗ್ರಿ ವಿತರಣೆ ಮಾಡಲಾಗಿದ್ದು, ಇದರಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕೆಂಬ ಆಶಯ ವ್ಯಕ್ತವಾಯಿತು. ಶಾಸಕರ ಆಪ್ತ ಸಹಾಯಕ ಧನರಾಜ್ ಸಮಾಜಮುಖಿ ಕಾರ್ಯಗಳ ಮೂಲಕ ಜನರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಕಾರ್ಯ ತಲುಪಲಿ ಎಂದು ಹಾರೈಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಗುರು ಹೊಸಗೇರಪ್ಪ, ಶಿಕ್ಷಕರಾದ ಚಂದ್ರಶೇಖರ್ ಶೆಟ್ರು, ಸುನೀತಾ, ಎಸ್. ಭವ್ಯ ಮತ್ತು ಯುವ ಮುಖಂಡರು ವಾಸುಕುಮಾರ, ಬಾಗ್ಲಿ ಮಕ್ಬುಲ್ ಸಾಬ್, ಮಲ್ಲಿಕಾರ್ಜುನ, ಗಜೇಂದ್ರ, ರಾಘವೇಂದ್ರ, ರವಿ ಸೇರಿದಂತೆ ಬಹುಜನರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಂಪ್ಲಿ ಶಾಲಾ ಸುದ್ದಿ ಸೇವಾ ಕಾರ್ಯಕ್ರಮ ಧನರಾಜ್
© Siddi TV — Kampali | ಪ್ರಾದೇಶಿಕ ಸುದ್ದಿಗಳಿಗಾಗಿ ನಮ್ಮನ್ನು ಅನುಸರಿಸಿ
Previous Post Next Post

Contact Form

f="https://unpkg.com/video.js/dist/video-js.css" rel="stylesheet">