Kampli: ಕಂಪ್ಲಿ ಪಟ್ಟಣದ ರಸ್ತೆ, ವೃತ್ತಗಳ ಮರುನಾಮಕರಣ: ಆಕ್ಷೇಪಣೆಗಳಿಗೆ ಆಹ್ವಾನ


ಕಂಪ್ಲಿ ಪಟ್ಟಣದ ರಸ್ತೆ, ವೃತ್ತಗಳ ಮರುನಾಮಕರಣ: ಆಕ್ಷೇಪಣೆಗಳಿಗೆ ಆಹ್ವಾನ


ಕಂಪ್ಲಿ, ಆಗಸ್ಟ್ 5 (ಸಿದ್ದಿ ಟಿವಿ):

ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿನ ವೃತ್ತಗಳನ್ನು ಹೊಸದಾಗಿ ನಾಮಕರಣ ಮಾಡುವ ಉದ್ದೇಶದಿಂದ, ಪಟ್ಟಣದ ವಿವಿಧ ಸಮಾಜದವರು ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದು, ಸಾರ್ವಜನಿಕರಿಂದ ಲಿಖಿತ ಆಕ್ಷೇಪಣೆಗಳಿಗೆ ಆಹ್ವಾನ ನೀಡಲಾಗಿದೆ.

ಈ ನಾಮಕರಣದ ಪ್ರಕಾರ –
✦ ನಟರಾಜ ಕಲಾ ಮಂದಿರದ ಮುಂಭಾಗದ ವೃತ್ತವನ್ನು: ದೇವರ ದಾಸಿಮಯ್ಯ ವೃತ್ತ
✦ ನಟರಾಜ ಕಲಾ ಮಂದಿರದ ಮುಂಭಾಗದ ಕಮಾನಿಗೆ: ಶ್ರೀ ಚೌಡೇಶ್ವರ ಮಹಾದ್ವಾರ
✦ ವಿನಾಯಕ ನಗರ 5ನೇ ಅಡ್ಡರಸ್ತೆಯ ಚತುರ್ಮುಖ ರಸ್ತೆಗೆ: ಶ್ರೀ ಮಹಾಯೋಗಿ ವೇಮನ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೃತ್ತ
✦ 05ನೇ ವಾರ್ಡ್‌ಗೆ: ಬೀರಲಿಂಗೇಶ್ವರ ನಗರ ಎಂದು ನಾಮಕರಣ ಮಾಡುವ ಉದ್ದೇಶವಿದೆ.

ನಾಮಕರಣ ಕುರಿತಾಗಿ ಯಾರಾದರೂ ಆಕ್ಷೇಪಣೆಗಳನ್ನು ಸಲ್ಲಿಸಬೇಕಾದಲ್ಲಿ, ಲಿಖಿತವಾಗಿ ಮತ್ತು ಸಮಂಜಸ ದಾಖಲೆಗಳೊಂದಿಗೆ ಈ ಪ್ರಕಟಣೆ ಪ್ರಕಟವಾದ ದಿನದಿಂದ 30 ದಿನಗಳ ಒಳಗೆ ಕಂಪ್ಲಿ ಪುರಸಭೆ ಕಚೇರಿಗೆ ಸಲ್ಲಿಸಬಹುದು.

ಅವಧಿ ಮೀರಿದ ನಂತರ ಬಂದ ಯಾವುದೇ ಆಕ್ಷೇಪಣೆ ಅಥವಾ ಮನವಿಗಳನ್ನು ಪರಿಗಣಿಸಲಾಗದು ಎಂದು ಪುರಸಭೆಯ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

– ಸಿದ್ದಿ ಟಿವಿ ಸುದ್ದಿ
Previous Post Next Post

Contact Form

f="https://unpkg.com/video.js/dist/video-js.css" rel="stylesheet">