Kampli : ಶಿಕ್ಷಣ ಪ್ರೇಮಿ ಅಂಜಿಯವರ ಸಮಾಜಮುಖಿ ಕಾರ್ಯ ಶ್ಲಾಘನೀಯ : ರಾಮು.ಟಿ


ಶಿಕ್ಷಣ ಪ್ರೇಮಿ ಅಂಜಿಯವರ ಸಮಾಜಮುಖಿ ಕಾರ್ಯ

ಶಿಕ್ಷಣ ಪ್ರೇಮಿ ಅಂಜಿಯವರ ಸಮಾಜಮುಖಿ ಕಾರ್ಯ ಶ್ಲಾಘನೀಯ : ರಾಮು.ಟಿ

ಕಂಪ್ಲಿ, ಆಗಸ್ಟ್ 12

ಎಮ್ಮಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನ ಪೇಟೆ ಹಾಗೂ ಬ್ರಾಹ್ಮಣರ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರೇಮಿಯಾದ ಅಂಜಿ ಯವರ ಮಗಳು ಕು. ಎ. ಸಾಕ್ಷಿಸಿಂಗ್ ಅವರ ನಾಲ್ಕನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನೋಟ್ಬುಕ್, ಪೆನ್ನು ಹಾಗೂ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.

“ಹುಟ್ಟುಹಬ್ಬಗಳನ್ನು ಆರ್ಭಟದಿಂದ ಆಚರಿಸುವ ಬದಲು ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಬೇಕು. ಒಂದು ಪುಸ್ತಕ, ಒಂದು ಪೆನ್ನು, ಒಬ್ಬ ವಿದ್ಯಾರ್ಥಿ, ಒಬ್ಬ ಶಿಕ್ಷಕ – ಇವರೆಲ್ಲರೂ ಜಗತ್ತನ್ನು ಬದಲಾಯಿಸಬಹುದು” — ಟಿ. ರಾಮು
“ಶಿಕ್ಷಣ ಹುಲಿಯ ಹಾಲು ಇದ್ದಂತೆ – ಅದನ್ನು ಕುಡಿದವರು ಘರ್ಜಿಸಲೇಬೇಕು. ಮಕ್ಕಳನ್ನು ಶಾಲೆಯಿಂದ ದೂರವಾಗದಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ” — ಚಂದ್ರಶೇಖರ್ ಭಂಡಾರಿ ನಾಯಕ್, SWS ಶಾಲೆಯ SDMC ಅಧ್ಯಕ್ಷ
“ಪ್ರತಿಯೊಬ್ಬ ಮಕ್ಕಳು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ, ಉತ್ತಮ ಅಂಕಗಳೊಂದಿಗೆ ಶಿಕ್ಷಕರ ಹಾಗೂ ಪೋಷಕರ ಕೀರ್ತಿಯನ್ನು ಹೆಚ್ಚಿಸಬೇಕು” — ಅಂಜಿ

ಕಾರ್ಯಕ್ರಮದಲ್ಲಿ ಪಂಪಾಪತಿ, ಮಲ್ಲೇಶ್, ಮಲ್ಲಿಕಾರ್ಜುನ, ನಾರಾಯಣ, ವಿಶ್ವನಾಥ, ಭೀಷ್ಮ, ಚಿದಾನಂದ, ಶಿಕ್ಷಕಿ ಪುಷ್ಪಾವತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">