Kampli : ಕಂಪ್ಲಿಯ ರಂಗಭೂಮಿ ಕಲಾವಿದ ಬೂದಗುಂಪಿ ಹುಸೇನ್ ಸಾಹೇಬ್ ನಿಧನ

ಕಂಪ್ಲಿಯ ರಂಗಭೂಮಿ ಕಲಾವಿದ ಬೂದಗುಂಪಿ ಹುಸೇನ್ ಸಾಹೇಬ್ ನಿಧನ

ಕಂಪ್ಲಿ: ರಂಗಭೂಮಿಯಲ್ಲಿ ಹಲವು ದಶಕಗಳಿಂದ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡ ಹಿರಿಯ ರಂಗಭೂಮಿ ಕಲಾವಿದ, ಹಾಸ್ಯ ನಟ, ಮಿಮಿಕ್ರಿ ತಜ್ಞ, ಖಳನಾಯಕ, ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರರಾಗಿದ್ದ ಬೂದಗುಂಪಿ ಹುಸೇನ್ ಸಾಹೇಬ್ (ಹುಸೇನ್ ಸಾಬ್) ಅವರು ಮಂಗಳವಾರ (18-11-2025) ಬೆಳಗಿನ ಜಾವ ನಿಧನರಾದರು. ಅವರು ತಮ್ಮ ಜೀವನದ ‘ಪಾತ್ರ’ ಮುಗಿಸಿ, ಬಣ್ಣ ಕಳಚಿ, ತೆರೆಮರೆಯ ಸೇರಿದಂತಾಗಿದೆ ಎಂದು ರಂಗಭೂಮಿ ವಲಯದವರು ಕಂಬನಿ ಮಿಡಿದಿದ್ದಾರೆ.ಮುಸ್ಲಿಂ ಸಮುದಾಯದ ಪ್ರಮುಖ ಮುಖರಾಗಿದ್ದರೂ, ಹುಸೇನ್ ಸಾಹೇಬ್ ಎಲ್ಲಾ ಧರ್ಮ, ಸಮುದಾಯದವರೊಂದಿಗೆ ಸ್ನೇಹ ಬೆಳೆಸಿ, ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಕನ್ನಡ ಹಿತರಕ್ಷಕ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ರಂಗಭೂಮಿಯಲ್ಲಿ ನಾಯಕ ಪಾತ್ರದಿಂದ ಖಳನಾಯಕನ ತನಕ, ಹಾಸ್ಯ ಪಾತ್ರದಿಂದ ಪೋಷಕ ಪಾತ್ರದ ತನಕ ನೂರಾರು ನಾಟಕಗಳಲ್ಲಿ ತಮ್ಮ ಕಲಾ ಮಿಂಚು ತೋರಿಸಿದ್ದರು. ಅವರ ಅಭಿನಯದ ವೈವಿಧ್ಯತೆ, ಪಾತ್ರಧಾರಿತ್ವದ ಗಾಢತೆ ರಂಗಭೂಮಿ ಪ್ರೇಕ್ಷಕರಲ್ಲಿ ಸದಾ ಮೆಚ್ಚುಗೆ ಪಡೆದಿತ್ತು.

ಪ್ರಸಿದ್ಧ ಖಳನಟ ವಜ್ರಮುನಿ ಅವರಿಂದ “ರಾಜ್ಯಮಟ್ಟದ ಉತ್ತಮ ರಂಗಭೂಮಿ ಕಲಾವಿದ” ಪ್ರಶಸ್ತಿ ಪಡೆದಿರುವುದು ಹುಸೇನ್ ಸಾಹೇಬ್ ಅವರ ಕಲಾ ಜೀವನದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ.

ಹುಸೇನ್ ಸಾಹೇಬ್ ಅವರ ಅಗಲಿಕೆಯಿಂದ ಕಂಪ್ಲಿ ಹಾಗೂ ಸುತ್ತಮುತ್ತಲಿನ ಕಲಾ ಮತ್ತು ಸಾಮಾಜಿಕ ವಲಯದಲ್ಲಿ ಆಳವಾದ ದುಃಖ ವ್ಯಕ್ತವಾಗಿದೆ.


Previous Post Next Post

Contact Form

f="https://unpkg.com/video.js/dist/video-js.css" rel="stylesheet">