Turvihal-48 ವರ್ಷಗಳ ಹಳೆಯ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ.

48 ವರ್ಷಗಳ ಹಳೆಯ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ.

ತುರ್ವಿಹಾಳಿನ  ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 1975ರಿಂದ 80ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಆಯೋಜಿಸಿರುವ  ಗುರುವಂದನಾ ಹಾಗೂ  ಸ್ನೇಹ ಸಮ್ಮಿಲನ ಕಾರ್ಯಕ್ರಮವು ದಿನಾಂಕ : 26-03-2023 ಭಾನುವಾರ ಬೆಳಗ್ಗೆ  ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ರುದ್ರಸ್ವಾಮಿ ಕೆಂಡದ ಮಠ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರಣಯ್ಯ ಸ್ವಾಮಿ ಸುಮಾರ 48ವರ್ಷಗಳ ನಂತರ ನಮ್ಮ ಗುರುಗಳು ಹಾಗೂ ಸ್ನೇಹಿತರನ್ನು ಒಗ್ಗೂಡಿಸಿ ನಾವುಗಳು ಗುರುಗಳಿಂದ ಉತ್ತಮ ಜ್ಞಾನ ಮಾರ್ಗದರ್ಶನ ಪಡೆದು ಬೆಳಕಿನ ಬಾಳ್ವೆಯನ್ನು ಮಾಡುತಿದ್ದೇವೆ. ಈ ನಮ್ಮ ಧನ್ಯತಾ ಭಾವದ ಕೃತಜ್ಞತೆಯ ಪ್ರತಿಬಿಂಬವೇ ಗುರುವಂದನಾ ಕಾರ್ಯಕ್ರಮದ ವಾಗಿದೆ.
ಎಲ್ಲಾ ಸ್ನೇಹಿತರು ಹಾಗೂ ಸಹಪಾಠಿಗಳು ಈ ಗುರು ವಂದನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಈ ಸಂದರ್ಭದಲ್ಲಿ ಬಸವರಾಜ. ಯಂಕರೆಡ್ಡಪ್ಪ ಹೊಸಳ್ಳಿ. ಕರೇಶಪ್ಪ ಸಾಹುಕಾರ. ಶಂಕರ ನಾಯಕ. ನಿಂಗಪ್ಪ ಕಟ್ಟಿಮನಿ. ಗೋವಿಂದರೆಡ್ಡಪ್ಪ ಹೊಸಳ್ಳಿ. ಸಿದ್ದನಗೌಡ ಗುಂಜಳ್ಳಿ. ಲಿಂಗರಾಜ ಎಲೆಕೂಡ್ಲಿಗಿ. ರಾಚಪ್ಪ ಶೆಟ್ಟಿ. ಸತ್ಯಪ್ಪ ಸಾಹುಕಾರ್. ಹಂಪಣ್ಣ ಗುಂಜಳ್ಳಿ. ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು.
ರಿಪೋರ್ಟರ್ ಮೆಹಬೂಬ ಮೋಮಿನ.
Previous Post Next Post

Contact Form

f="https://unpkg.com/video.js/dist/video-js.css" rel="stylesheet">