ಸಚಿವ ಹಾಲಪ್ಪ ಸೋಲಿಗೆ ವಿರೋಧಿಗಳಿಂದ 10 ಕಡೆ ವಾಮಾಚಾರ ಶಂಕೆ
ಯಲಬುರ್ಗಾ : ಸಚಿವ ಹಾಲಪ್ಪ ಆಚಾರ್ ಸೋಲಿಗೆ ತಾಲೂಕಿನ 10 ಕಡೆ ವಿರೋಧಿಗಳು ವಾಮಾಚಾರ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.
ತಾಲೂಕಿನ ಮಲಕಸಮುದ್ರ,ವಂಕಲಕುಂಟಾ, ಒಡ್ರಕಲ್ ಸೇರಿದಂತೆ ಹತ್ತು ಕಡೆಗಳಲ್ಲಿ ವಾಮಾಚಾರ ಮಾಡಲಾಗಿದೆ. ಮಲಕಸಮುದ್ರ ಗ್ರಾಮದ ಗಂಗೂರೇಶ್ವರ ದೇವಸ್ಥಾನದ ಹತ್ತಿರ ತಾಳಪತ್ರ, ತೆಂಗಿನಕಾಯಿ ಸಿಕ್ಕಿದ್ದು, ಬಿಜೆಪಿ ಕಾರ್ಯಕರ್ತರು ತಾಳಪತ್ರವನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಹಾಲಪ್ಪ ಆಚಾರ್, ಗೌರಾ ಬಸವರಾಜ್ ಹೆಸರು ಬರೆಯಲಾಗಿದೆ.
ಇನ್ನೂ ನಾಲ್ಕೈದು ಗ್ರಾಮದ ಕೆಲವು ಕಡೆ ರಸ್ತೆಯಲ್ಲಿ ವಾಮಾಚಾರದ ವಾಸ್ತಗಳನ್ನು ಬಿಜೆಪಿ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. ಇದೊಂದು ವಿರೋದ ಪಕ್ಷದವರ ಕುತಂತ್ರವಾಗಿದ್ದು ಹಾಲಿ ಶಾಸಕ ಹಾಲಪ್ಪ ಆಚಾರ್ ಅವರ ಸೋಲಬೇಕು ಎಂದು ಈ ರೀತಿ ವಾಮಾಚಾರ ಮಾಡಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಶನಿವಾರ ರ ಬೆಳಿಗ್ಗೆ ಸುಮಾರು ಹತ್ತು ಕಡೆ ಈ ವಾಮಾಚಾರದ ವಸ್ತುಗಳು ಪತ್ತೆಯಾಗಿವೆ, ಬಿಜೆಪಿ ಕಾರ್ಯಕರ್ತರು ಅವನ್ನು ಹುಡುಕಿ ಸುಟ್ಟು ಹಾಕಿದ್ದಾರೆ.ಇದೊಂದು ರಾಜಕೀಯ ಕುತಂತ್ರವಾಗಿದೆ, ಜನರಲ್ಲಿ, ಕಾರ್ಯಕರ್ತರಲ್ಲಿ ಬಿಜೆಪಿ ವಿರೋಧಿಗಳು ಭಯ ಹುಟ್ಟಿಸುತ್ತಿದ್ದು ವಿರೋಧಿಗಳ ತಂತ್ರ ಮಂತ್ರ ಫಲಿಸುವುದಿಲ್ಲ ಎಂದು ಕಾರ್ಯಕರ್ತರು ಹೇಳಿದ್ದಾರೆ.
ದಕ್ಷಿಣ ಕರ್ನಾಟಕ, ಹಳೇ ಮೈಸೂರು ಭಾಗದಲ್ಲಿ ಕಾಣಬರುತ್ತಿದ್ದ ವಾಮಾಚಾರ ಪದ್ಧತಿ ಈಗ ಕಲ್ಯಾಣ ಕರ್ನಾಟಕಕ್ಕೂ ಕಾಲಿಟ್ಟಿದ್ದು ರಾಜಕೀಯ ತಿಕ್ಕಾಟ, ಕಾಲೇಳೆತಕ್ಕೆ ಕಾರಣವಾಗಿದೆ.
ವರದಿ : ಈರಯ್ಯ ಕುರ್ತಕೋಟಿ
Tags
ರಾಜಕೀಯ