Yalaburga-ಕಾಂಗ್ರೆಸ್ ಮೊದಲ ಪಟ್ಟಿ : ರಾಯರಡ್ಡಿಗೆ ಟಿಕೆಟ್, ಬಿಜೆಪಿಯಿಂದ ಯಾರಿಗೆ ?

ಕಾಂಗ್ರೆಸ್ ಮೊದಲ ಪಟ್ಟಿ : ರಾಯರಡ್ಡಿಗೆ ಟಿಕೆಟ್, ಬಿಜೆಪಿಯಿಂದ ಯಾರಿಗೆ ?
ಯಲಬುರ್ಗಾ : ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ 124 ಕ್ಷೇತ್ರಗಳ ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ನಿರೀಕ್ಷೆಯಂತೆ ಯಲಬುರ್ಗಾ ಕ್ಷೇತ್ರದಿಂದ ಬಸವರಾಜ್ ರಾಯರಡ್ಡಿ ಅವರಿಗೆ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಘೋಷಣೆ ಮಾಡಿದೆ.
ಈ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಹುರಿಯಾಳು ಘೋಷಿಸಿದ್ದು ಇತ್ತ ಬಿಜೆಪಿ ಪಕ್ಷದಿಂದ ಯಾರಿಗೆ ಟಿಕೆಟ್ ಎಂಬುದನ್ನು ಇನ್ನಷ್ಟೇ ಹೊರಬೀಳಬೇಕಿದೆ.
ಬಿಜೆಪಿಯಿಂದ ಬಹುತೇಕ ಹಾಲಪ್ಪ ಆಚಾರ್ ಅವರಿಗೇನೇ ಮತ್ತೊಮ್ಮೆ ಟಿಕೆಟ್ ಫೈನಲ್ ಎಂದು ಹೇಳಲಾಗುತ್ತಿದೆ, ಆದರೆ ಈ ಬಗ್ಗೆ ಇದುವರೆಗೂ ಜಿಲ್ಲಾ ಬಿಜೆಪಿ ಘಟಕವಾಗಲಿ,ರಾಜ್ಯ ನಾಯಕರಾಗಲಿ ನಿಶ್ಚಿತವಾಗಿ ಹೇಳುತ್ತಿಲ್ಲ. ಟಿಕೆಟ್ ಅಧಿಕೃತವಾಗಿ ದೃಢಪಟ್ಟಿಲ್ಲ.ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರನ್ನು ಎದುರಿಸಲು ಸಮರ್ಥ ಅಭ್ಯರ್ಥಿ  ಅವಶ್ಯಕತೆ ಇದ್ದು ಬಿಜೆಪಿ ಹಾಲಪ್ಪ ಆಚಾರ್ ಅವರ ಹೆಸರು ಮುಂಚೂಣಿ ಇದೆ, ಜೊತೆಗೆ ಹೈಕಮಾಂಡ್ ಬೇರೆ ಕ್ಷೇತ್ರದಂತೆ ಇಲ್ಲಿ ಹೊಸ ಲೆಕ್ಕಾಚಾರ ಹಾಕುವ ಯೋಚನೆ ಮಾಡಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಆದರೂ ಕೂಡಾ ಅಂತಿಮವಾಗಿ ಟಿಕೆಟ್ ಹಂಚಿಕೆ ವಿಷಯ ಆರ್ ಎಸ್ ಎಸ್ ನ ಆಂತರಿಕ ಸರ್ವೇ, ಗುಜರಾತ್ ಮಾಡೆಲ್ ಅಳವಡಿಕೆ ಮೇಲೆ ನಿಂತಿದೆ ಎನ್ನಲಾಗುತ್ತಿದೆ.
ಹಾಗೇನಾದರೂ ಆದರೆ ಯಲಬುರ್ಗಾ ಕ್ಷೇತ್ರಕ್ಕೆ ಬಿಜೆಪಿ ಮಾಜಿ ಶಾಸಕ ದಿ. ಈಶಣ್ಣ ಗುಳಗಣ್ಣನವರ ಪುತ್ರ ನವೀನ್ ಕುಮಾರ್ ಗುಳಗಣ್ಣನವರ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯಕ್ಕೆ ಅಂತಹ ಯಾವ ಬೆಳವಣಿಗೆ ಕಾಣುತ್ತಿಲ್ಲವಾದರೂ ಮುಂದಿನ ದಿನಗಳಲ್ಲಿ ನಡೆಯುವ ವಿದ್ಯಮಾನಗಳ, ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಟಿಕೆಟ್ ಅಂತಿಮ ಗೊಳ್ಳುವ ನಿರೀಕ್ಷೆಯಿದೆ.

ವರದಿ : ಈರಯ್ಯ ಕುರ್ತಕೋಟಿ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">