Belagavi : ಮತದಾನಕ್ಕೂ ಮುನ್ನ, ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಮಹಿಳೆ ಸಾವು


ಮತದಾನಕ್ಕೂ ಮುನ್ನ, ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಮಹಿಳೆ ಸಾವು

*******************************

 ಬೆಳಗಾವಿ: ಮತ ಚಲಾಯಿಸಲು ಬಂದಿದ್ದ ಮಹಿಳೆಯೊಬ್ಬರು ಮತ ಚಲಾವಣೆಗೂ ಮುನ್ನ ಮೃತಪಟ್ಟಿರುವ ಘಟನೆ ಸವದತ್ತಿ ಯಲ್ಲಮ್ಮ ಕ್ಷೇತ್ರ ವ್ಯಾಪ್ತಿಯ ಯರಝರ್ವಿ ಗ್ರಾಮದಲ್ಲಿ ನಡೆದಿದೆ.

ಪಾರವ್ವ ಈಶ್ವರ ಸಿದ್ನಾಳ(ಪನದಿ) (68) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಪಾರವ್ವ ತಮ್ಮ ಹಕ್ಕು ಚಲಾಯಿಸಲು ಬಂದಿದ್ದರು. ಆದರೆ, ಮತದಾನಕ್ಕೂ ಮುನ್ನ, ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">