Koppal : ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶಾಂತಿಯುತ, ಶೇ. 70 ರಷ್ಟು ಮತದಾನ


 ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶಾಂತಿಯುತ, ಶೇ. 70 ರಷ್ಟು ಮತದಾನ

ಕರ್ನಾಟಕ ವಿಧಾನಸಭಾ 2023 ಸಾರ್ವತ್ರಿಕ ಚುನಾವಣೆ ಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು ಒಟ್ಟು ಶೇ.70 ರಷ್ಟು ಮತದಾನವಾದ ವರದಿಯಾಗಿದೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯ ನೀಡಿದ ಮಾಹಿತಿಯಲ್ಲಿ ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಟ್ಟು 70  ರಷ್ಟು ಶೇಕಡಾವರು ಮತದಾನವಾಗಿದೆ. ಕೊಪ್ಪಳ - ಶೇ.68, ಕನಕಗಿರಿ ಶೇ 72.89,ಗಂಗಾವತಿ ಶೇ 70,ಯಲಬುರ್ಗಾ ಶೇ 74.35, ಕುಷ್ಟಗಿ ಶೇ 67.54.ರಷ್ಟು ಮತದಾನವಾದ ವರದಿಯಾಗಿದೆ.

ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ವಗ್ವಾದಗಳನ್ನು ಬಿಟ್ಟರೆ ಬಹುತೇಕ ಶಾಂತಿಯುತ ಮತದಾನವಾಗಿದೆ. ಮತದಾನದ ನಂತರ ಬರುವ ಬೀಫ್ ಸೌಂಡ್ 7 ಸೆಕೆಂಡ್ ಸಮಯ ತೆಗೆದುಕೊಂಡಿದ್ದರ ಪರಿಣಾಮ ಮತದಾನ ನಿದಾನ ವಾಗಿದ್ದು,ಕೆಲವು ಕಡೆ ರಾತ್ರಿ 8 ಗಂಟೆಯವರಿಗೂ ಮತದಾನವಾದ ವರದಿಯಾಗಿದೆ. ಮಾತಯಂತ್ರ ಕೈಕೋಟ್ಟು ಸುಮಾರು ಅರ್ಧ ತಾಸು ಮತದಾನ ಸ್ಥಗಿತವಾದ ಘಟನೆ ಕೆಲವು ಮತಗಟ್ಟೆ ಯಲ್ಲಿ ನಡೆದ ವಾರದಿಯಾದವು.

ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರಗಳ ಚುನಾವಣೆ ಮತದಾನ ಶಾಂತಿಯುತ ವಾಗಿ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಮೇ 13 ರಂದು ಕೊಪ್ಪಳ ನಗರದ ಗವಿಸಿದ್ದೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜು ನಲ್ಲಿ ಐದು ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">