ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ನೀಡಿ ಮುಖಂಡ ಅನ್ವರ್ ಪಾಷಾ...
ತುರ್ವಿಹಾಳ:ತಾಲ್ಲೂಕಿನ ತುರ್ವಿಹಾಳ ಪಟ್ಟಣದ ವಿಶ್ವೇಶ್ವರಯ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಅಸಂಘಟಿತ ಕಾರ್ಮಿಕರ ಸಂಘದಿಂದ ಮಂಗಳವಾರ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಸಂಘದ ಕಾರ್ಯಾಲಯದ ಮುಂದೆ ಕಾರ್ಮಿಕ ಸಂಘದ ಅಧ್ಯಕ್ಷ ಮುನಿಸ್ವಾಮಿ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಅನ್ವರ್ ಪಾಷಾ ನಮ್ಮ ಕಾರ್ಮಿಕ ಸಂಘವು ಐದು ವರ್ಷಗಳಲ್ಲಿ ಸರಕಾರವು ಕಾರ್ಮಿಕರಿಗೆ ನಿಡುತ್ತಿರುವ 19 ಸೌಲಭ್ಯಗಳು ಇದ್ದು ಅದರಲ್ಲಿ ನಮ್ಮ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಗಳ ಕಾರ್ಮಿಕರು ಮದುವೆ,
ಸ್ಕಾಲರ್ಶಿಪ್ ಇತ್ಯಾದಿ ಸವಲತ್ತುಗಳನ್ನು ಪಡೆಯುವ ಮೂಲಕ ಸರಕಾರದ 65 ಲಕ್ಷ ಅನುದಾನ ಪಡೆದುಕೊಂಡಿದ್ದೇವೆ ನಮ್ಮ ಕಾರ್ಮಿಕರು ಸರ್ಕಾರ ಹಾಗೂ ಇಲಾಖೆಯಿಂದ ನಿಡುವ ಸೌಲಭ್ಯಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪಡೆಯುವ ಮೂಲಕ ಸ್ವಾವಲಂಬಿಗಳಾಗಬೇಕು ಎಂದರು.
ಹಾಗೂ ಹಿರಿಯ ಪತ್ರಕರ್ತರಾದ ಎಸ್. ದೇವೇಂದ್ರಗೌಡ ಮಾತನಾಡಿ ನಾವೆಲ್ಲರು ಒಂದೇ ಎನ್ನುವ ಕಾರ್ಯಕ್ರಮ ಇದಾಗಿದ್ದು ಇದರ ಜೊತೆಯಾಗಿ ಪ್ರತಿದಿನದ ಸವಾಲುಗಳನ್ನು ಹಾಗೂ ನಮ್ಮ ಬೇಡಿಕೆಗಳನ್ನು ಹೇಚ್ಚಿನಾ ಹೋರಾಟ ಮಾಡುವ ಮೂಲಕ ಸರ್ಕಾರಗಳಿಗೆ ಹಾಗೂ ಸಾರ್ವಜನಿಕರಿಗೆ ತಲುಪಿಸುವ ಕೆಲಸ ನಮ್ಮಿಂದಾಗುತ್ತಿದೆ ಎಂದು ಹೇಳಿದರು.
ಸನ್ಮಾನ:ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ನೂತನ ಶಾಸಕ ಆರ್ ಬಸನಗೌಡ ತುರ್ವಿಹಾಳ ಮಸ್ಕಿ ವಿಧಾನಸಭಾ ಕ್ಷೇತ್ರ ಹಾಗೂ ಇತ್ತೀಚಿಗೆ
ಬಳ್ಳಾರಿಯಲ್ಲಿ ಎಂಬಿಬಿಎಸ್ ವೈದ್ಯಕೀಯ ವ್ಯಾಸಂಗ ಮುಗಿಸಿಕೊಂಡು ಬಂದ ಗಣೇಶ್ ಕುಮಾರ ತಂ/ಮುನಿಸ್ವಾಮಿ ಕಟ್ಟಿಮನಿ ರವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಸಕ ಆರ್.ಬಸನಗೌಡ ತುರವಿಹಾಳ,ಸಿಐಟಿಯು ಮುಖಂಡ ಎಸ್. ದೇವೇಂದ್ರಗೌಡ,ಮರಿಸ್ವಾಮಿ ಹತ್ತಿಗುಡ್ಡ,ರಾಮಣ್ಣ ನಂದವಾಡಿಗೆ,ಗೌರವಾಧ್ಯಕ್ಷ ಹೊನ್ನೂರಪ್ಪ ಕುಂಬಾರ,ಚಂದ್ರಶೇಖರ್,ನಾಗಲಿಂಗಪ್ಪ,ವೆಂಕಟೇಶ್ ಮಾಕಾಪುರ,ಶಿವಪುತ್ರಪ್ಪ ಡಿಎಸ್‌ಎಸ್,ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದರು.