KR Pete : ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಪರ ಭರ್ಜರಿ ಪ್ರಚಾರ ನೆಡೆಸಿದ ಯತೀಂದ್ರ ಸಿದ್ದರಾಮಯ್ಯ


ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಪರ ಭರ್ಜರಿ ಪ್ರಚಾರ ನೆಡೆಸಿದ ಯತೀಂದ್ರ ಸಿದ್ದರಾಮಯ್ಯ

ಕೃಷ್ಣರಾಜಪೇಟೆ ತಾಲ್ಲೂಕಿನ‌ ಕಿಕ್ಕೇರಿ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಸುಪುತ್ರ ಕಾಂಗ್ರೆಸ್ ಅಭ್ಯರ್ಥಿಯಾದ ಬಿ.ಎಲ್ ದೇವರಾಜು ಪರ ಪ್ರಚಾರ ನೆಡೆಸಿ ಮಾತನಾಡಿ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ಇದ್ದ ಸಮಯದಲ್ಲಿ ರಾಜ್ಯದ ಜನತೆಗೆ  ಹಲವು ಬಾಗ್ಯಗಳನ್ನು ನೀಡಿದ್ದು  ಸಿದ್ದರಾಮಯ್ಯ ನವರ ಅನ್ನಬಾಗ್ಯ ಯೋಜನೆ ಇಂದ ಎಷ್ಟೂ ಹಸಿದ ಹೊಟ್ಟೆ ತುಂಬಿದೆ ಅದನ್ನೂ ಈಗಲೂ ಯಾರು ಮರೆತಿಲ್ಲ ಅಲ್ಲದೆ ಮೊತ್ತೊಮ್ಮೆ ಕಾಂಗ್ರೆಸ್  ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ 200 ಯೂನಿಟ್ ವಿದ್ಯುತ್, ಕುಟುಂಬದ ಮಹಿಳೆ ಯಜಮಾನಿಗೆ ಮಾಸಿಕ 2 ಸಾವಿರ, ಪ್ರತಿ ವೈಕ್ತಿಗೆ 10 ಕೆ.ಜಿ ಅಕ್ಕಿ, ನಿರುದ್ಯೋಗ ಭತ್ಯ 3000 ಮತ್ತು 1500 ಉಚಿತವಾಗಿ  ನೀಡಲಿದ್ದು ಇನ್ನೂ ಹಲವು ಅಭಿವೃದ್ಧಿಗಳ ಬಗ್ಗೆ ಚಿಂತನೆ ನೆಡೆಸಿದೆ ಅದಕ್ಕಾಗಿ ಈ ಬಾರಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾದ ಬಿ.ಎಲ್ ದೇವರಾಜು ರವರಿಗೆ ಎಚ್ಚು ಮತಗಳನ್ನು ನೀಡಿ ಗೆಲ್ಲಿಸುವ ಮೂಲಕ  ಸಿದ್ದರಾಮಯ್ಯ ಮತ್ತು ಡಿ.ಕೆ ಶಿವುಕುಮಾರ್ ರವರ ಕೈ ಬಲಪಡಿಸುವಂತೆ ತಿಳಿಸಿದ್ರು..

ಈ ಸಂಧರ್ಭದಲ್ಲಿ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್, ಬಿ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಕಿಕ್ಕೇರಿ ಸುರೇಶ್, ನಾಗೇಂದ್ರಕುಮಾರ್, ಯೂಥ್ ಕಾಂಗ್ರೆಸ್ ಅದ್ಯಕ್ಷ ಡಿ.ಎಂ ಮಹೇಂದ್ರ, ಮುಖಂಡರಾದ ಸಾಸಲು ಈರಪ್ಪ, ಲಕ್ಷ್ಮೀಪುರ ಚಂದ್ರೇಗೌಡ, ಮಣೀಶ್, ಚೇತನ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.

ವರದಿ : ಶಂಭು ಕಿಕ್ಕೇರಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">