ಎಸ್ಸೆಸ್ಸೆಲ್ಸಿಯಲ್ಲಿ ಶೇ 97.44 ಅಂಕ ಪಡೆದ ವಿದ್ಯಾರ್ಥಿ ದೀಪಾಗೆ ಸನ್ಮಾನ
ತುರ್ವಿಹಾಳ: 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಪಲಿತಾಂಶ ಸೋಮವಾರ ಪ್ರಕಟವಾಗಿದ್ದು, ಸ್ಥಳೀಯ ಸರ್ಕಾರಿ ಪ್ರೌಢಶಾಲೆಗೆ ಉತ್ತಮ ಫಲಿತಾಂಶ ಬಂದಿದೆ.
ದೀಪಾ ವೆಂಕಟೇಶ ಶೇ97.44% ಪ್ರಥಮ, ಸರೋಜ ಶರಣಬಸವ ಶೇ93.60% ದ್ವಿತೀಯ, ರಂಜಿತಾ ಬಸವರಾಜ ಶೇ91.20% ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ, ಪರೀಕ್ಷೆ ಬರೆದ ಒಟ್ಟು 192 ವಿದ್ಯಾರ್ಥಿಗಳಲ್ಲಿ 130 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 15 ಉನ್ನತ ದರ್ಜೆ, 40 ಪ್ರಥಮ ದರ್ಜೆ, 41 ದ್ವಿತೀಯ ದರ್ಜೆ, 40 ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ಸೋಮಲಿಂಗಪ್ಪ ತಿಳಿಸಿದ್ದಾರೆ.
ಶಾಲೆಗೆ ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿನಿ ದ್ವೀಪಾ ವೆಂಕಟೇಶ ಅವರಿಗೆ ಪಟ್ಟಣ ಪಂಚಾಯಿತಿ ಸದಸ್ಯ ಅರವಿಂದ ರೆಡ್ಡಿ ಹಾಗೂ ಶಿಕ್ಷಣ ಪ್ರೇಮಿಗಳು ಸಿಹಿ ತಿನ್ನಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಂತಮುತ್ತಯ್ಯ ಗುರುವಿನ್, ಸಂಪಣ್ಣ ಮೇಗೂರು,ಮಲ್ಲೇಶ ಬಡಿಗೇರ,ವೆಂಕೋಬಮಾಸ್ತಾರ, ನವಾಬ್ ಶರೀಫ್.ಹನುಮಂತ ಕಂಬಾರ ಇದ್ದರು.
ವರದಿ : ಮೆಹಬೂಬ್ ಮೊಮಿನ್