Siruguppa : ಸಿಡಿಲು ಬಡಿದು ಕೃಷಿ ಕಾರ್ಮಿಕೆ ಮಹಿಳೆ ಸಾವು, ಇಬ್ಬರಿಗೆ ಗಾಯ


ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಕುಡುದ್ರಾ ಗ್ರಾಮದಲ್ಲಿ ನಡೆದ ಘಟನೆ.ಸಿಡಿಲು ಬಡಿದು ಕೃಷಿ ಕಾರ್ಮಿಕೆ ಮಹಿಳೆ ಸಾವು, ಇಬ್ಬರಿಗೆ ಗಾಯ

ಸಿರುಗುಪ್ಪ : ತಾಲ್ಲೂಕಿನ ಹೊನ್ನರಹಳ್ಳಿ,ಶ್ರೀಧರಗಡ್ಡೆ ಗ್ರಾಮದ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಸಿಡಿಲು, ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿನ ಹೊಡೆತಕ್ಕೆ  ಕೃಷಿ ಕಾರ್ಮಿಕೆ ಮಹಿಳೆ ಮೃತಪಟ್ಟಿದ್ದು, ಒಬ್ಬ ಮಹಿಳೆಗೆ ಮತ್ತು ಬೆಳಗಾವಿ ಕುರಿಗಾಯಿ ಅವರಿಗೆ ಗಾಯವಾಗಿವೆ.

ತಾಲ್ಲೂಕಿನ ಹೊನ್ನರಹಳ್ಳಿ ಗ್ರಾಮದ ಭತ್ತದ ಜಮೀನಿನಲ್ಲಿ ಹುಲ್ಲು ಕೂಡಿಸಲು ಹೋದಾಗ ಕುಡುದರಹಾಳ ಗ್ರಾಮದ ಮಂಗಮ್ಮ ಗಂಡ ಗೋಪಾಲ(40ವರ್ಷ)ಗೆ ಸಿಡಿಲು ಬಡಿದು ಸಾವನ್ನಪ್ಪಿದರು.

ಜತೆಯಲ್ಲಿದ್ದ  ಹನುಮಂತಮ್ಮ(30) ಗಂಡ ರಮೇಶ ಇರಿಗೆ ಗಾಯವಾಗಿದೆ.

ತಾಲ್ಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಬೆಳಗಾವಿ ಕುರಿಗಾಯಿ ಮನಗಿನಿ ಸಿದ್ದು ಕಿಲ್ಲಾರಿ (58ವರ್ಷ) ಎಡಗೈಗೆ ಶಕೆ ಬಡೆದು ಅಂಗಿ ಸುಟ್ಟು, ಚರ್ಮದ ಮೇಲೆ ಗೊಬ್ಬೆಯಾಗಿದೆ.ಸಿರುಗುಪ್ಪ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Previous Post Next Post

Contact Form

f="https://unpkg.com/video.js/dist/video-js.css" rel="stylesheet">