Yalaburga : ಚುನಾವಣೆ ಅಕ್ರಮ ತಡೆಗಟ್ಟಲು ಆಯೋಗಕ್ಕೆ ಪಕ್ಷೇತರ ಅಭ್ಯರ್ಥಿ ದೂರು-Siddi Tv


ಚುನಾವಣೆ ಅಕ್ರಮ ತಡೆಗಟ್ಟಲು ಆಯೋಗಕ್ಕೆ ಪಕ್ಷೇತರ ಅಭ್ಯರ್ಥಿ ದೂರು

ಕುಕನೂರು  :  ಯಲಬುರ್ಗಾ ವಿಧಾನಸಭಾ ಚುನಾವಣೆಯಲ್ಲಿ ಈ ಸಲ ಹಿಂದೆಂದೂ ಕಂಡು ಕೇಳರಿಯದಷ್ಟು ಹಣದ ಹೊಳೆ ಹರಿಯುತ್ತಿದೆ, ಚುನಾವಣೆ ಅಕ್ರಮಗಳನ್ನು ತಡಗಟ್ಟುವಂತೆ ರಾಜ್ಯ ಮತ್ತು ಕೇಂದ್ರ ಚುನಾವಣೆ ಆಯೋಗಕ್ಕೆ ಪಕ್ಷೇತರ ಅಭ್ಯರ್ಥಿಯೊಬ್ಬರು ದೂರು ಸಲ್ಲಿಸಿದ್ದಾರೆ.

ಯಲಬುರ್ಗಾ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದ ಶಂಕರ್ ರೆಡ್ಡಿ ವಿ ಸೋಮರಡ್ಡಿ ಅವರು ಚುನಾವಣೆ ಅಕ್ರಮ ನಿಲ್ಲಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಈ ಕುರಿತು ಕುಕನೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಿನ ಕಾಲದಲ್ಲಿ ಜನ ಸಾಮಾನ್ಯರು ಚುನಾವಣೆಗೆ ನಿಲ್ಲಲು ಆಗುತ್ತಿಲ್ಲ, ಕೇವಲ ಬಲಿಷ್ಠ ರದವರೇ ಸ್ಪರ್ಧೆ ಮಾಡುವಂತಾಗಿದೆ, ಹಣ ಉಳ್ಳವರು ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡಬೇಕಾಗಿದ್ದು, ಹಣ, ಇತರ ಆಮಿಷಕ್ಕೆ ಜನತೆ ಬಲಿಯಾಗುತ್ತಿದ್ದಾರೆ.

ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲು,ಅಕ್ರಮ ಗಳನ್ನು ತಡೆಗಟ್ಟಲು ಚುನಾವಣೆ ಆಯೋಗ ಹದ್ದಿನ ಕಣ್ಣಿಡಬೇಕು, ಅಕ್ರಮ ನಿಲ್ಲಿಸಲು ಕಾರ್ಯ ಪ್ರವೃತ್ತರಾಗಬೇಕು, ಈ ನಿಟ್ಟಿನಲ್ಲಿ ಆಯೋಗ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಬೇಕು ಎಂದು ಸೋಮರಡ್ಡಿ ಹೇಳಿದರು

ಕ್ಷೇತ್ರದಲ್ಲಿ ಹಣ ಹಂಚುತ್ತಿದ್ದ ವಿಡಿಯೋ  ಸಾಕ್ಷ್ಯಗಳನ್ನು ಸೇರಿಸಿ  ಅಗತ್ಯ ದಾಖಲೆಯೊಂದಿಗೆ ವಕೀಲರ ಮೂಲಕ ಹೈಕೋರ್ಟ್ ಲಿ ರಿಟ್ ಅರ್ಜಿ ಯನ್ನು ಕೂಡಾ ಪಕ್ಷೇತರ ಅಭ್ಯರ್ಥಿ ಸಲ್ಲಿಸಿರುತ್ತಾರೆ.

ವರದಿ : ಈರಯ್ಯ ಕುರ್ತಕೋಟಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">