Koppal : ಭೂಮಿ ಸಂಸ್ಥೆಯಿಂದ TET ಉಚಿತ ಕಾರ್ಯಾಗಾರ

 

ಭೂಮಿ ಸಂಸ್ಥೆಯಿಂದ TET ಉಚಿತ ಕಾರ್ಯಾಗಾರ
ಕೊಪ್ಪಳ,: ಭೂಮಿ ಸಂಸ್ಥೆಯಲ್ಲಿ ಉಚಿತ ಟಿಇಟಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ನಗರದ ಭೂಮಿ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ಶಿಕ್ಷಕ ಅರ್ಹತಾ ಪರೀಕ್ಷೆಯ (TET) ಕುರಿತಾಗಿ ಉಚಿತ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಗಾರದ ದಿವ್ಯ ಸಾನಿಧ್ಯವನ್ನು ರಾಮಕೃಷ್ಣ ಆಶ್ರಮದ ಚೈತನ್ಯಾನಂದ ಮಹಾಸ್ವಾಮಿಗಳವರು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಟಿಇಟಿಗೆ ಸಂಬಂಧಿಸಿದ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ರವಿ ನಿಂಗೂಜಿಯವರು ಶೈಕ್ಷಣಿಕ ಮನೋವಿಜ್ಞಾನದ ಕುರಿತು, ಭೂಮಿ ಸಂಸ್ಥೆಯ ಗೌರವ ಮಾರ್ಗದರ್ಶಕರಾದ ಭೀಮಪ್ಪ ಎಚ್ ಗೊಲ್ಲರವರು ಸಮಾಜ ವಿಜ್ಞಾನ ಮತ್ತು ಬೋಧನಾ ಶಾಸ್ತ್ರದ ಕುರಿತು, ಹನುಮಂತಪ್ಪ ಶಿರ್ಗೂಜಿ ಅವರು ವಿಜ್ಞಾನ ಮತ್ತು ಬೋಧನಾ ಶಾಸ್ತ್ರದ ಕುರಿತು, ಆಂಗ್ಲ ಭಾಷೆ ಸಂಪನ್ಮೂಲ ವ್ಯಕ್ತಿಗಳಾದ ಜಿಎಸ್ ಪಾಟೀಲ್ ರವರು ಉಪನ್ಯಾಸವನ್ನು ನೀಡಿದರು. 
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಸಂಸ್ಥೆಯ ನಿರ್ದೇಶಕರಾದ ರಮೇಶ ಕುಶೆಕಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಎರಡು ನೂರಕ್ಕೂ ಅಧಿಕ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳು ಭಾಗವಹಿಸಿ ಕಾರ್ಯಗಾರದ ಸದುಪಯೋಗ ಪಡಿಸಿಕೊಂಡರು.
ಕಾರ್ಯಕ್ರಮವನ್ನು ಭೂಗೋಳಶಾಸ್ತ್ರದ ಉಪನ್ಯಾಸಕರಾದ ಉಮೇಶ್ ಪಾಟೀಲ್ ನಿರೂಪಿಸಿದರೆ, ಇತಿಹಾಸ ಉಪನ್ಯಾಸಕರಾದ ಹನುಮೇಶ್ ಯಾದವ್ ವಂದಿಸಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">