Kampli : ಅಪೌಷ್ಠಿಕ ನಿವಾರಣೆಗಾಗಿ ಮಕ್ಕಳಿಗೆ ಮೊಟ್ಟೆ,ಬಾಳೆ ಹಣ್ಣು, ಶೇಂಗ ಚಿಕ್ಕಿ ನೀಡುವ ಸಂಖ್ಯೆಯಲ್ಲಿ ಸರ್ಕಾರ ಹೆಚ್ಚಳ : ಶಾಸಕ ಜೆ.ಎನ್.ಗಣೇಶ್

 

ಕಂಪ್ಲಿ.ಅ.26: ಅಪೌಷ್ಠಿಕ ನಿವಾರಣೆಗಾಗಿ ಮಕ್ಕಳಿಗೆ ಮೊಟ್ಟೆ,ಬಾಳೆ ಹಣ್ಣು, ಶೇಂಗ ಚಿಕ್ಕಿ ನೀಡುವ ಸಂಖ್ಯೆಯಲ್ಲಿ ಸರ್ಕಾರ ಹೆಚ್ಚಳ ಮಾಡಿದೆ  ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ  ಜೆ.ಎನ್.ಗಣೇಶ  ತಿಳಿಸಿದರು.

ಅವರು ತಾಲೂಕಿನ ದೇವಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ 2023-24ನೇ ಸಾಲಿನ ರಾಜ್ಯದ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತ ಹೀನತೆ ನಿವಾರಣೆಗಾಗಿ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಲ್ಲಿ ಪ್ರೌಢಶಾಲೆಯ  ಎಲ್ಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ಮೊಟ್ಟೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ, ಶನಿವಾರ ಮಾತನಾಡಿದರು.

ಈವರೆಗೂ 1ರಿಂದ 8 ನೇ ತರಗತಿ ವರೆಗೂ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಇದೀಗ 9 ಹಾಗೂ 10ನೇ ತರಗತಿಯ ಮಕ್ಕಳಿಗೂ ಮೊಟ್ಟೆ ಬಾಳೆ ಹಣ್ಣು, ಶೇಂಗ ಚಿಕ್ಕಿ ನೀಡಲಾಗುತ್ತದೆ. ಮಕ್ಕಳು ಸದೃಢರಾಗುವುದರ ಜೊತೆಗೆ ಕಲಿಕೆಗೆ ಹೆಚ್ಚು ಒತ್ತು ಕೊಡಿ ಎಂದು ಹೇಳಿದರು.ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾವಂತರಾಗಿ ಮಾಡಬೇಕು ಎಂದು  ತಿಳಿಸಿದರು.

ಈ ಸಂದರ್ಭದಲ್ಲಿ ದೇವಸಮುದ್ರ ಗ್ರಾಪಂ ಅಧ್ಯಕ್ಷೆ ಮಾಯಮ್ಮ,ಮಾಜಿ ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್,ಮಾಜಿ ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಷಣ್ಮುಖಪ್ಪ,ಸಿಅರ್ ಪಿ ವಿರೇಶ,ಮಖ್ಯಗುರು ದೊಡ್ಡಬಸಪ್ಪ, ತಾಲೂಕು ಅಧ್ಯಕ್ಷ ಹನುಂಮತಪ್ಪ,ಎಸ್.ಡಿ.ಎಂ.ಸಿ ಅಧ್ಯಕ್ಷ ವಿ.ವೆಂಕಟೇಶಲು ಎಸ್.ಡಿ.ಎಂ.ಸಿ ಸದಸ್ಯರು ಗ್ರಾಪಂ ಸದಸ್ಯರು ಗ್ರಾಮದ ಹಿರಿಯರು,ಮುಖಂಡರು,ಸಾರ್ವಜನಿಕರು ಶಾಲಾ ಶಿಕ್ಷಕರು ಸೇರಿದಂತೆ ಮತ್ತಿತರರು ಹಾಜರಿದ್ದರು.

ವರದಿ : ಚನ್ನಕೇಶವ
Previous Post Next Post

Contact Form

f="https://unpkg.com/video.js/dist/video-js.css" rel="stylesheet">