Vanasiri : ಪರಿಸರ ಉಳಿಸಿ ಬೆಳಸುವ ನಿಟ್ಟಿನಲ್ಲಿ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ‌ : ಕೆ.ಪಿ.ನಂಜುಂಡಿ

 

ಪರಿಸರ ಉಳಿಸಿ ಬೆಳಸುವ ನಿಟ್ಟಿನಲ್ಲಿ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ‌ : ಕೆ.ಪಿ.ನಂಜುಂಡಿ

ಕನಕಗಿರಿ ತಾಲೂಕಿನ ನವಲಿ ಹತ್ತಿರದ ಭೈರಾಪೂರ ಗ್ರಾಮದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

 ಭೈರಾಪೂರ ಗ್ರಾಮದಲ್ಲಿ ಮಾತೋರ್ಶೀ ಶಿವಶರಣೆ ಪಾರ್ವತಮ್ಮ ಗಂ ಮೌನೇಶ ಆಚಾರಿ ಕೊಂಡಜ್ಜಿ ಸಿಂಧನೂರು ಸಾ.ಭೈರಾಪೂರ ಇವರ ದಿವ್ಯ ಸಾನಿದ್ಯದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಜಗದ್ಗುರು ಆದಿಲಿಂಗೇಶ್ವರ, ಶ್ರೀ ಜಗದ್ಗುರು ಮೌನೇಶ್ವರ,ಶ್ರೀ ಬಸವಣ್ಣ,ಶ್ರೀ ಕಾಳಿಕಾದೇವಿ,ಶ್ರೀ ಗಣೇಶ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ನೂತನವಾಗಿ ನಿರ್ಮಿಸಲಾದ ದೇವಸ್ಥಾನ ಉದ್ಘಾಟನಾ ಸಮಾರಂಭದ ಅಂಗವಾಗಿ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ರಾಜ್ಯಾದ್ಯಕ್ಷರಾದ ಕೆ. ಪಿ.ನಂಜುಂಡಿ ಅವರು ಮಾತನಾಡಿ ಸಿಂಧನೂರಿನ ವನಸಿರಿ ಫೌಂಡೇಶನ್ ತಂಡ ರಾಜ್ಯಾದ್ಯಂತ ಸಸಿಗಳನ್ನು ನೆಟ್ಟು   ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿರುವುದು ನನ್ನ ಗಮನಕ್ಕೆ ಬಂತು.ಇದರ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರಿಗೆ ಇತ್ತೀಚೆಗೆ ಕರ್ನಾಟಕ ಸರ್ಕಾರದ ವತಿಯಿಂದ ಜೂನ್5 ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ನೀಡಿ ಗೌರವಿಸಿದೆ ಇದು ನಮ್ಮ ಹೆಮ್ಮೆಯ ವಿಷಯ ಪರಿಸರವನ್ನು ಉಳಿಸಿಬೆಳಸುವಲ್ಲಿ ನಾವುಗಳೆಲ್ಲರೂ ಮುಂದಾಗಬೇಕು ಇವತ್ತಿನ ಈ ಮೌನೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಆಗಮಿಸಿ ದೇವಸ್ಥಾನದಲ್ಲಿ ಸಸಿಗಳನ್ನು ನೆಟ್ಟು ಈ ಮೂಲಕ ಇಲ್ಲಿ ನೆರೆದಿರುವ ನಮ್ಮ ಸಮಾಜದ ಬಂಧುಗಳಿಗೆ ಸಾರ್ವಜನಿಕರಿಗೆ ಪರಿಸರದ ಮಹತ್ವ ತಿಳಿಸಿದ್ದಾರೆ,ಸಿಂಧನೂರಿನಲ್ಲಿ ಕಡಿದು ಹಾಕಿದ ಆಲದ ಮರವನ್ನು ನೆಟ್ಟು ಪೋಷಣೆ ಮಾಡಿ ಒಂದು ಮರದ ಅವಶ್ಯಕತೆ ಮನುಷ್ಯನಿಗೆ ಎಷ್ಟು ಮುಖ್ಯ ಎನ್ನುವುದನ್ನು ಅವರು ತಿಳಿಸಿಕೊಟ್ಟಿದ್ದಾರೆ.ಇಂತಹ ಕಾರ್ಯಗಳನ್ನು ವನಸಿರಿ ತಂಡ ಇನ್ನೂ ಹೆಚ್ಚು ಹೆಚ್ಚು ಮಾಡಲಿ ಜಗದ್ಗುರು ಶ್ರೀ ಮೌನೇಶ್ವರ ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ, ಮಾತೋರ್ಶಿ ಶಿವಶರಣೆ ಪಾರ್ವತಮ್ಮನವರು, ಸಮಾಜದ ಮುಖಂಡರುಗಳಾದ ಲೋಹಿತ್ ವೈ ಕಲ್ಲೂರು,ಬ್ರಹ್ಮಗಣೇಶ ವಕೀಲರು,ರಾಮುಗಾಣದಾಳ,ಅಮರೇಶ ವನಸಿರಿ ಫೌಂಡೇಶನ್ ಜಾಲತಾಣದ ಅದ್ಯಕ್ಷ ಚನ್ನಪ್ಪ ಕೆ.ಹೊಸಹಳ್ಳಿ, ಮಸ್ಕಿ ತಾಲೂಕ ಅದ್ಯಕ್ಷ ರಾಜು ಬಳಗಾನೂರ,ವೆಂಕಟರಡ್ಡಿ, ಮೌನೇಶ ಸೋಮನಾಳ, ಗುರುಮೂರ್ತಿ ತುರವಿಹಾಳ, ಪ್ರಲ್ಹಾದ ಎಲೆಕೂಡ್ಲಿಗೆ, ಅಮರೇಶ,ಕಾಶಿಪತಿ ಜವಳಗೇರಿ,ಜೀವಣ್ಣ,ಗಣೇಶ ಸುಕಲಪೇಟೆ,ಬಸವರಾಜ ಕಮತಗಿ,ರಂಗಪ್ಪ,ಇನ್ನೂ ಹಲವಾರು ಜನರು ಉಪಸ್ಥಿತರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">